
ಒಂದು ವರುಷದ ಹುಡುಕಾಟದ ಬಳಿಕ ಮೋಹಿತ್ ಸೂರಿಗೆ ಹಾಫ್ ಗರ್ಲ್ ಫ್ರೆಂಡ್ ಸಿಕ್ಕಳು! ಚೇತನ್ ಕಾದಂಬರಿ ಆಧಾರಿತ ಸಿನಿಮಾ ಬರ್ತಿದೆ, ಮೋಹಿತ್ ನಿರ್ದೇಶಿಸುತ್ತಿದ್ದಾರೆಂಬ ಸುದ್ದಿಗೆ
ಒಂದು ವರುಷ ಏಜಾಗಿದೆ. ಆದ್ರೆ, ಇದಕ್ಕೆ ಹೀರೋಯಿನ್ ಆಗಿ ಕೃತಿ ಸನನ್ ಅಥವಾ ಕತ್ರಿನಾ ಕೈಫ್ ಆಯ್ಕೆ ಆಗುತ್ತಾರೆಂಬ ಸುದ್ದಿಯಿತ್ತು. ಆದರೆ, ಈಗ ಆ ಜಾಗಕ್ಕೆ ಧುತ್ತನೆ ಪ್ರತ್ಯಕ್ಷ ಆದವಳು
ಶ್ರದ್ಧಾ ಕಪೂರ್. ಇಂಗ್ಲಿಷ್ ಬಲ್ಲ, ದೆಹಲಿಯ ಸೊಫಿಸ್ಟಿಕೇಟೆಡ್ ಹುಡುಗಿ ಮತ್ತು ಪಕ್ಕಾ ಹಳ್ಳಿ ಹುಡುಗನ ನಡುವೆ ನಡೆಯುವ ಲವ್ ಸ್ಟೋರಿ ಇದಾಗಿದೆ. ಇಲ್ಲಿ ಆದಿತ್ಯ ರಾಯ್ ಕಪೂರ್
ನಾಯಕ. ಮೋಹಿತ್ ಕ್ಯಾಮೆರಾದ ಎದುರು ಶ್ರದ್ಧಾ ಕಾಣಿಸಿಕೊಳ್ಳುತ್ತಿರುವುದು ಮೂರನೇ ಸಲ. ಈ ಹಿಂದಿನ 'ಆಶಿಕಿ 2', 'ಏಕ್ ವಿಲನ್'ನಲ್ಲೂ ಶ್ರದ್ಧೆಯಿಂದ ನಟಿಸಿದವಳು ಈಕೆ. ಶ್ರದ್ಧಾ ಈ ಹಿಂದೆ ನಟಿಸಿ ಮೆಚ್ಚುಗೆ ಗಿಟ್ಟಿಸಿಕೊಂಡ `ಹೈದರ್' ಚಿತ್ರ ಕೂಡ ಕಾದಂಬರಿ ಆಧಾರಿತವೇ.
Advertisement