
ಲಾಸೇಂಜಲಿಸ್: ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅಮೇರಿಕಾದ ಧಾರಾವಾಹಿ 'ಕ್ವಾಂಟಿಕೋ'ದಲ್ಲಿ ನೀಡಿದ ತಮ್ಮ ನಟನೆಗಾಗಿ, 'ಪೀಪಲ್ಸ್ ಚಾಯ್ಸ್ ೨೦೧೬' (ಜನರ ಆಯ್ಕೆ) ಪ್ರಶಸ್ತಿ ಗೆದ್ದಿದ್ದಾರೆ.
ಕ್ವಾಂಟಿಕೋದಲ್ಲಿ ೩೩ ವರ್ಷದ ನಟಿ ಅಲೆಕ್ಸ್ ಪ್ಯಾರಿಶ್ ಹೆಸರಿನ ಎಫ್ ಬಿ ಐ ಏಜೆಂಟ್ ಪಾತ್ರವನ್ನು ನಿರ್ವಹಿಸಿದ್ದರು. ಇವರು ಈ ಪ್ರಶಸ್ತಿಗಾಗಿ ಇತರ ನಟಿಯರಾದ ಎಮ್ಮಾ ರಾಬರ್ಟ್ಸ್, ಜೇಮಿ ಲೀ ಕರ್ಟಿಸ್, ಲಿಯಾ ಮೈಕೆಲ್ ಮತ್ತಿ ಮಾರ್ಸಿಕಾ ಗೇ ಹಾರ್ಡನ್ ಅವರೊಂದಿಗೆ ಸ್ಪರ್ಧಿಸಿದ್ದರು.
Advertisement