ಖಳ ಈಗ ನಾಯಕ್!

ಸನ್ನಡತೆ ಆಧಾರದ ಮೇಲೆ ಶಿಕ್ಷೆಯ ಅವಧಿ ಕಡಿತಗೊಂಡು ಸಂಜಯ್ ದತ್ ಫೆ.27ಕ್ಕೆ ಜೈಲಿನಿಂದ ವಾಪಸಾಗ್ತಿದ್ದಾರೆ. ಮುನ್ನಾಭಾಯಿ ಬಿಡುಗಡೆ ಆಗಿ ಬರೋದನ್ನೇ ಬಾಲಿವುಡ್...
ಸಂಜಯ್ ದತ್
ಸಂಜಯ್ ದತ್
Updated on

ಸನ್ನಡತೆ ಆಧಾರದ ಮೇಲೆ ಶಿಕ್ಷೆಯ ಅವಧಿ ಕಡಿತಗೊಂಡು ಸಂಜಯ್ ದತ್ ಫೆ. 27ಕ್ಕೆ ಜೈಲಿನಿಂದ ವಾಪಸಾಗ್ತಿದ್ದಾರೆ. ಮುನ್ನಾಭಾಯಿ ಬಿಡುಗಡೆ ಆಗಿ ಬರೋದನ್ನೇ ಬಾಲಿವುಡ್ ಕಾಯ್ತಾ  ಇದೆ. ಯಾಕೆ ಗೊತ್ತಾ?

ಸನ್ನಡತೆಯನ್ನು ಆಧರಿಸಿ ಮುನ್ನಾಭಾಯಿ ಮುಂಚಿತವಾಗಿಯೆೀ ಜೈಲಿನಿಂದ ವಾಪಸಾಗ್ತಿದ್ದಾರೆ. ಪರೋಲ್ ಪಡೆದು ಆಗಾಗ್ಗೆ ಮನೆ ಸೇರಿಕೊಳ್ಳುತ್ತಿದ್ದ ಸಂಜಯ್ ದತ್‍ಗೆ ಪರ್ಮನೆಂಟಾಗಿ ಫೆ.27ಕ್ಕೆ ರಿಲೀಫ್  ಸಿಗುತ್ತಿದೆ. ಸಂಜಯ್ ಹೀಗೆ ಕಂಬಿಗಳ ಕೋಣೆಯಿಂದ ಹೊರಗೆ ಬರೋ ವಿಚಾರ ಕೇಳಿ ಕೇವಲ ಕುಟುಂಬದವರಷ್ಟೇ ಸಂಭ್ರಮಿಸುತ್ತಿಲ್ಲ. ಇಡೀ ಬಾಲಿವುಡ್‍ಗೆ ಇದು  ಹೇಳತೀರದ ಸಂಭ್ರಮ.

ಯಾಕಂದ್ರೆ ಸಂಜಯ್ ದತ್ ಕೈಯಲ್ಲಿ ಅಷ್ಟೊಂದು ಸಿನಿಮಾಗಳಿವೆ. ಅವರನ್ನೇ ನಂಬಿಕೊಂಡು, ಅವರ ಡೇಟ್ಸ್‍ಗೆ ಕಾಯುತ್ತಿರುವ ನಿರ್ದೇಶಕರಿದ್ದಾರೆ. ಸಂಜಯ್ರ ಮುಂದಿನ ಕನಸುಗಳಿಗೆ ಹಣ  ಸುರಿದ ನಿರ್ಮಾಪಕರಿದ್ದಾರೆ. ದತ್ ಹೊರಗೆ ಬಂದ್ರೆ ಇವರ ಕನಸುಗಳು ಪುನಃ ರೆಕ್ಕೆ ಬಡಿದು ಜಿಗಿಯುತ್ತವೆ. ದತ್ ಮೇಲೆ ಬಯೋಪಿಕ್ ಸಂಜಯ್ ದತ್‍ರ ನೈಜ ಬದುಕೇ ಬಾಲಿವುಡ್‍ನ ಥ್ರಿಲ್ಲರ್ ಸಿನಿಮಾ ಆಗಬಹುದು. ಈ ಸಾಹಸಕ್ಕೆ ವಿಧು ವಿನೋದ್ ಚೋಪ್ರಾ, ರಾಜ್‍ಕುಮಾರ್ ಹಿರಾನಿ ಕೈಹಾಕಿ ಒಂದು ವರುಷವೇ ಆಗಿದೆ.

ದತ್‍ಗೆ `ಮುನ್ನಾಭಾಯಿ' ಇಮೇಜ್ ತಂದುಕೊಟ್ಟ ರಾಜ್‍ಕುಮಾರ್ ಹಿರಾನಿ ಇದರ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಸ್ವತಃ ದತ್ ಅವರೇ ಈ ಸಿನಿಮಾಕ್ಕೆ ಹಣ ಹೂಡುತ್ತಿದ್ದಾರೆ. ಅಷ್ಟೇ ಅಲ್ಲ,  ಖುದ್ದಾಗಿ ತಮ್ಮ ಜೀವನಚಿತ್ರದ ಸ್ಕ್ರಿಪ್ಟ್‍ಗೆ ಸಹಕರಿಸುತ್ತಿದ್ದಾರೆ. ಈ ಸಿನಿಮಾ ಪ್ರಾಜೆಕ್ಟ್ ಶೇ.10ರಷ್ಟಾಗಿದೆಯಷ್ಟೇ. ಇದರಲ್ಲಿ ಸಂಜಯ್ ದತ್, ರಣಬೀರ್ ಕಪೂರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಭಿನ್ನ ಮೇಕಿಂಗ್, ಬಿಗ್ ಬಜೆಟ್ಟಿನ ಸಿನಿಮಾ ಕೂಡ ಇದಾಗಿರೋದ್ರಿಂದ 2017ರ ಆರಂಭದಲ್ಲಿ ತೆರೆಕಾಣುವ ಸಾಧ್ಯತೆಯಿದೆ. ಟೋಟಲ್ ಧಮಾಲ್ ಸಂಜಯ್ ದತ್ ಕೆಲವು ವರ್ಷಗಳಿಂದ  ಕಾಮಿಡಿ ಸಿನಿಮಾಗಳಲ್ಲಿ ಕಾಣಿಸಿಕೊಳ್ತಿರೋದೇ ಹೆಚ್ಚು. ಅಂಥ ಸಿನಿಮಾಗಳು ಸೂಪರ್ ಹಿಟ್ ಕೂಡ ಆಗಿವೆ.

`ಧಮಾಲ್', `ಡಬಲ್ ಧಮಾಲ್' ಅನ್ನು ನಿರ್ದೇಶಿಸಿದ್ದ ಇಂದ್ರಕುಮಾರ್ ಈಗ ದತ್ ಅವರ ನಾಯಕತ್ವದಲ್ಲಿ `ಟೋಟಲ್ ಧಮಾಲ್' ಅನ್ನು ಪ್ರೇಕ್ಷಕರ ಮುಂದಿಡ್ತಿದ್ದಾರೆ. 2015ರ ಕೊನೆಯಲ್ಲಿ  ಇದು ತೆರೆ ಕಾಣಬೇಕಿತ್ತು. ದತ್ ಅವರ ಬಿಡುಗಡೆಗೆ ಕಾಯುತ್ತಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತಷ್ಟೇ. ಅರ್ಷದ್ ವಾರ್ಸಿ, ರಿತೇಶ್ ದೇಶ್‍ಮುಖ್, ಜಾವೇದ್ ಜಾಫ್ರಿ ಇರುವ ಈ ಸಿನಿಮಾದ ಶೂಟಿಂಗ್ ಅಂತೂ ಪೂರ್ತಿ ಮುಗಿದಿದೆ. ಈ ಸಿನಿಮಾದ ಹಾಡುಗಳು ಗಮನ ಸೆಳೆದಿದ್ದು, ಟಿ ಸಿರೀಸ್ ಆಡಿಯೋ ಕಂಪನಿಗೆ 5 ಕೋಟಿ ರುಪಾಯಿಗೆ ಮಾರಾಟವಾಗಿವೆ.

ಹಸ್‍ಮುಖ್ ಪಿಘಲ್ ಗಯಾ ಸಂಜಯ್ ದತ್‍ರ ಹೋಂ ಪ್ರೊಡಕ್ಷನ್ನಿಂದ ಬರುತ್ತಿರುವ ಈ ಸಿನಿಮಾ ಸೆಟ್ಟೇರಿದ್ದು 2014ರಲ್ಲಿ. ಅಂದುಕೊಂಡಂತೆ ಆಗಿದ್ದಿದ್ದರೆ ಇದು ಕಳೆದ ವರ್ಷದ ಬೇಸಿಗೆಯಲ್ಲಿ ತೆರೆ ಕಾಣಬೇಕಿತ್ತು. ಆದರೆ, ಸಂಜಯ್ ಜೈಲಲ್ಲಿದ್ದರಲ್ಲಾ? ಪ್ರಭುದೇವ್ ಅವರ ಕೊರಿಯೋಗ್ರಫಿ ಇರುವ ಈ ಚಿತ್ರದಲ್ಲಿ ಅಮಿತಾಭ್ ಜೊತೆ ಸಂಜಯ್ ದತ್ ನಟಿಸುತ್ತಿದ್ದಾರೆ. ಸೇಜಲ್ ಶಾ ನಿರ್ದೇಶನದ ಈ ಸಿನಿಮಾದಲ್ಲಿ ವಿದ್ಯಾಬಾಲನ್ ಕೂಡ ಇದ್ದಾರೆ. ಮಲ್ಟಿ ಸ್ಟಾರ್‍ಗಳ `ಪವರ್' ಬಾಲಿವುಡ್‍ನ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಚಿತ್ರ `ಪವರ್'. ರಾಜ್‍ಕುಮಾರ್ ಸಂತೋಷಿ ಆ್ಯಕ್ಷನ್ ಕಟ್ ಹೇಳ್ತಿರೋ ಸಿನಿಮಾದಲ್ಲೂ ಸಂಜಯ್ ಜೊತೆ ಅಮಿತಾಭ್ ನಟಿಸುತ್ತಿದ್ದಾರೆ. ಅಲ್ಲದೆ, ಅಜಯ್ ದೇವಗನ್, ಅನಿಲ್ ಕಪೂರ್, ಕಂಗನಾ ರಣೌತ್, ಅಮೀಷಾ ಪಟೇಲ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ವರುಷದ ಡಿಸೆಂಬರ್‍ನಲ್ಲಿ `ಪವರ್' ಅನ್ನು ಬಿಡುಗಡೆ ಮಾಡುವುದಾಗಿ ಸಂತೋಷಿ ಈಗಾಗಲೇ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ.`ಮುನ್ನಾಭಾಯಿ 3' ಕೂಡ 2017ಕ್ಕೆ ರಿಲೀಸ್ ಆಗುವ ಸುದ್ದಿಯಿದೆ. ಆದರೆ, ಈ ಚಿತ್ರಕ್ಕೆ ಇನ್ನೂ ತಯಾರಿ ನಡೆದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com