
ಕಥೆ, ಸ್ಕ್ರಿಪ್ಟ್ ಎಲ್ಲ ರೆಡಿಯಾಗಿ ಎರಡು ವರ್ಷ ಆಗಿದೆ. ಆದರೆ, ನಟಿಸಲು ಹೀರೋನೇ ಬರ್ಲಿಲ್ಲ ಎಂದು ತಮಾಷೆ ಮಾಡ್ತಿದ್ರು ಅಶುತೋಷ್ ಗೋವಾರಿಕರ್. 'ಮೊಹೆಂಜೋದಾರೋ' ಶೂಟಿಂಗಿಗೆ ಹೃತಿಕ್ ರೋಶನ್ ಹೋಗಿದ್ದೇ ಸುಮಾರು ಎರಡು ವರ್ಷದ ನಂತರ! ಯಾವತ್ತೂ ಯಾರನ್ನೂ ಕಾಯಿಸದ ಹೃತಿಕ್ ರೋಶನ್ ಈ ಸಿನಿಮಾಕ್ಕೆ ಹಿಂದೇಟು ಹಾಕಿದ್ದಕ್ಕೂ ಕಾರಣವುಂಟು. ಫಿಟ್ನೆಸ್ ಕೊರತೆ! ಈಗ ಶೂಟಿಂಗ್ ಶುರುವಾಗಿದೆ.
ಆರಂಭದಲ್ಲೇ ಹೃತಿಕ್‍ನ ಕಾಲಿಗೆ ಪೆಟ್ಟಾಗಿದೆ. ನಾಲ್ಕು ವಾರ ಬೆಡ್ ರೆಸ್ಟ್, ಶೂಟಿಂಗ್ ಪೋಸ್ಟ್ ಪೋನ್! ನಮ್ಮ ಕಣ್ಣೆದುರು ಸ್ಕ್ರೀನ್ ಮೇಲೆ ಕಾಣಿಸುವ ಹೃತಿಕ್ ತುಂಬಾ ಕಟ್ಟುಮಸ್ತು. ಅವನ ಮೈಮೇಲಿನ ಉಬ್ಬುತಗ್ಗುಗಳಲ್ಲಿ ಯಾರೂ ಕುಳಿತುಕೊಳ್ಳುವಷ್ಟು ತಾಕತ್ತಿದೆ ಅಂತ ನಮಗನ್ನಿಸುತ್ತೆ. ಆದರೆ, ಹೃತಿಕ್ ಒಳಗಿನ ನೋವುಗಳು ಹತ್ತಾರು ಲೆಕ್ಕದಲ್ಲಿವೆ. ಅದಕ್ಕೆಲ್ಲ ಕಾರಣ ಈ ಹಿಂದಿನ ಸಿನಿಮಾಗಳಲ್ಲಿ ಆದಂಥ ಪೆಟ್ಟುಗಳು. 'ಬ್ಯಾಂಗ್‍ಬ್ಯಾಂಗ್' ಸಿನಿಮಾದಲ್ಲಿ ತೆಲೆಗೆ ಏಟು ಬಿದ್ದು ರಕ್ತ ಚೆಲ್ಲಿ, ತಿಂಗಳಾನುಗಟ್ಟಲೆ ಶೂಟಿಂಗಿಗೆ ರಜೆ ಹಾಕಿದ್ದ ಹೃತಿಕ್ ಆಗ ಬೆನ್ನಿಗೂ ಪೆಟ್ಟು ಮಾಡ್ಕೊಂಡಿದ್ದರು. ಆ ಶಾಕ್‍ನಿಂದ ಹೃತಿಕ್ ಇನ್ನೂ ಹೊರಬಂದಿಲ್ಲ. ಹೃತಿಕ್‍ಗೆ ಜಿಮïನಲ್ಲಿ ಮೊದಲಿನಂತೆ ವರ್ಕೌಟ್ ಮಾಡಲೂ ಸಾಧ್ಯವಾಗ್ತಿಲ್ಲ.
ಇವೆಲ್ಲ ಕಾರಣಗಳಿಂದಲೇ ಹೃತಿಕ್ 'ಮೊಹೆಂಜೋದಾರೋ' ಚಿತ್ರೀಕರಣಕ್ಕೆ ತಡವಾಗಿ ಹೋಗಬೇಕಾಯ್ತು. ಕ್ರಿಷ್ ಸರಣಿ ಚಿತ್ರಗಳ ಸ್ಟಂಟ್‍ಗಳಲ್ಲೂ ಹೃತಿಕ್ ಮೇಲಿಂದ ಮೇಲೆ ಪೆಟ್ಟು ಮಾಡ್ಕೊಂಡು ಸಿನಿಮಾಗಳು ತಡವಾದವು. ಈ ಮೂರೂ ಚಿತ್ರಗಳಲ್ಲಿ ಮಣಿಕಟ್ಟಿಗೆ, ಮೊಣಕಾಲಿಗೆ, ಬೆನ್ನಿಗೆ, ಭುಜಕ್ಕೆ ಪೆಟ್ಟು ಮಾಡಿಕೊಂಡು, ಒಂದಿಷ್ಟು ತಿಂಗಳವರೆಗೆ ಚಿತ್ರೀಕರಣವನ್ನು ನಿಲ್ಲಿಸಲಾಗಿತ್ತು. ಈಗ 'ಮೊಹೆಂಜೋದಾರೋ'ಗೂ ಅದೇ ಸಮಸ್ಯೆ ಎದುರಾಗ್ತಿದೆ. ಈ ಫಿಟ್ನೆಸ್‍ನ ಸಮಸ್ಯೆಯಿಂದಲೇ ಹೃತಿಕ್‍ನ ತಡವಾಗಿ ರಿಲೀಸ್ ಆಗುತ್ತವೆ. ಸ್ಟಂಟ್ ದೃಶ್ಯಗಳಲ್ಲಿ ತೀರಾ ಪರ್ಫೇಕ್ಟಾಗಿ ನಟಿಸಬೇಕೆಂಬ ಹೃತಿಕ್‍ನ ಹಠವೇ ಇದಕ್ಕೆಲ್ಲ ಕಾರಣ ಆಗ್ತಿದೆ.
Advertisement