ಭಾರತದಲ್ಲಿ ಸೆಕ್ಷನ್ 377 ಹೋರಾಟದ ಬಗ್ಗೆ ಆಶಾವಾದವಿದೆ: ನಂದಿತಾ ದಾಸ್

ತಾವು ೧೯೯೬ ರಲ್ಲಿ ನಟಿಸಿದ 'ಫೈರ್' ಸಿನೆಮಾ ಸಲಿಂಗ ಕಾಮದ ಬಗ್ಗೆ ಜನರಲ್ಲಿ ಸರಿಯಾದ ಅಭಿಪ್ರಾಯ ಮೂಡಿಸಲಾಯಿತು ಎಂದು ನಂಬುವ ನಟಿ ನಂದಿತಾ ದಾಸ್ ಅವರು ಸದ್ಯದ
ನಟಿ ನಂದಿತಾ ದಾಸ್
ನಟಿ ನಂದಿತಾ ದಾಸ್
ಮುಂಬೈ: ತಾವು ೧೯೯೬ ರಲ್ಲಿ ನಟಿಸಿದ 'ಫೈರ್' ಸಿನೆಮಾ ಸಲಿಂಗಕಾಮದ ಬಗ್ಗೆ ಜನರಲ್ಲಿ ಸರಿಯಾದ ಅಭಿಪ್ರಾಯ ಮೂಡಿಸಲಾಯಿತು ಎಂದು ನಂಬುವ ನಟಿ ನಂದಿತಾ ದಾಸ್ ಅವರು ಸದ್ಯದ ಸೆಕ್ಷನ್ ೩೭೭ ಕಾನೂನು ಹಿಮ್ಮುಖವಾಗಿದೆ ಆದರೆ ಇದರ ಬಗೆ ಆಶಾವಾದವಿದೆ ಎಂದಿದ್ದಾರೆ. 
೨೦೦೯ ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗ ಕಾಮ ಕ್ರಿಮಿನಲ್ ಅಪರಾಧ ಅಲ್ಲ ಎಂಬ ತೀರ್ಪು ನೀಡಿತ್ತು ಆದರೆ ಸುಪ್ರೀಂ ಕೋರ್ಟ್, ಸಲಿಂಗ ಕಾಮ ಸೆಕ್ಷನ್ ೩೭೭ ಭಾರತೀಯ ಅಪರಾಧ ಕಾಯ್ದೆ ೨೦೧೩ ರ ಪ್ರಕಾರ ಕ್ರಿಮಿನಲ್ ಅಪರಾಧ, ಇದನ್ನು ಸರ್ಕಾರವಷ್ಟೇ ಬದಲಾಯಿಸಬೇಕು ಎಂಬ ತೀರ್ಪು ನೀಡಿ ಹೈಕೋರ್ಟ್ ತೀರ್ಪನ್ನು ಬದಲಿಸಿತ್ತು. 
"ನಮ್ಮ ದೇಶ ವಿರೋಧಾಭಾಸಗಳ ನೆಲೆ. ನಾವು ಪ್ರಗತಿಯತ್ತ ಎರಡು ಹೆಜ್ಜೆ ನಡೆದರೆ ಮತ್ತೆ ಹಿಮ್ಮುಖವಾಗಿ ಮೂರು ಹೆಜ್ಜೆ ಇಡುತ್ತೇವೆ. ದೆಹಲಿ ಹೈಕೋರ್ಟ್ ತೀರ್ಪಿನಿಂದ ನಾವೆಲ್ಲರೂ ಸಂಭ್ರಮಿಸಿದ್ದೆವು ಆದರೆ ಸುಪ್ರೀಂ ಕೋರ್ಟ್ ಇದಕ್ಕೆ ತಡೆ ನೀಡಿ ಚೆಂಡನ್ನು ಸಂಸತ್ತಿನ ಅಂಗಳಕ್ಕೆ ಎಸೆದಾಗ ಹಿಮ್ಮುಖವಾಗಿ ನಡೆದೆವು" ಎಂದು ನಟಿ-ಸಾಮಾಜಿಕ ಕಾರ್ಯಕರ್ತೆ ನಂದಿತಾ ಹೇಳಿದ್ದಾರೆ. 
"ಇದು ಕಷ್ಟದ ಹೋರಾಟ, ಆದರೆ ನಾನು ಆಶಾವಾದಿ. ಜನ ನಿಧಾನಕ್ಕೆ ಇದರ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಮುಖ್ಯವಾಹಿನಿಯಲ್ಲಿ ಈ ವಿಷಯ ಒಮ್ಮತವಾಗುತ್ತಿದೆ" ಎಂದು ಕೂಡ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com