ಮುಂಬೈ: ಪದ್ಮಶ್ರೀ ನನ್ನ ಕಠಿಣ ಶ್ರಮದ ಪ್ರತಿಫಲವಾಗಿ ದೊರೆತ ಗೌರವ ಎಂದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಪದ್ಮಶ್ರೀ ಗೌರವ ಪ್ರಶಸ್ತಿಗೆ ಪಾತ್ರರಾಗುವುದರ ಮೂಲಕ ನನ್ನ ಒಂದು ಕನಸು ನನಸಾಗಿದೆ. ಪ್ರಶಸ್ತಿ ಕುರಿತು ಭಾವನೆಗಳನ್ನು ಕೇವಲ ಪದಗಳಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪ್ರಿಯಾಂಕ ತಮ್ಮ ಮನದಾಳದ ಮಾತು ಹೊರಹಾಕಿದ್ದಾರೆ.
ಇತ್ತೀಚೆಗಷ್ಟೇ ಪ್ರಿಯಾಂಕಾ ಛೋಪ್ರಾ ದಕ್ಷಿಣ ಏಷ್ಯಾದಲ್ಲಿ ಪೀಪಲ್ಸ್ ಚಾಯ್ಸ್ ಪ್ರಶಸ್ತಿ ಪಡೆದ ಪ್ರಥಮ ನಟಿ ಎಂಬ ಹೆಗ್ಗಳಿಕೆಗೆ ಭಾಜನಾಗಿದ್ದರು. ಇದರ ಬೆನ್ನಲ್ಲೇ, ಪಿಂಕಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.