ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸೈಫೀನಾ ದಂಪತಿ
ಮುಂಬೈ: ಬಾಲಿವುಡ್ ಸ್ಟಾರ್ ದಂಪತಿ ಸೈಫ್ ಆಲಿಖಾನ್ ಮತ್ತು ಕರೀನಾ ಕಪೂರ್ ಖಾನ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವನ್ನು ಸ್ವತಃ ಸೈಫ್ ಆಲಿಖಾನ್ ದೃಢಪಡಿಸಿದ್ದಾರೆ. ಈ ಮೂಲಕ ಕಳೆದ ಕೆಲ ದಿನಗಳಿಂದ ಕರೀನಾ ಗರ್ಭಿಣಿ ಎಂದು ಕೇಳಿಬರುತ್ತಿದ್ದ ವದಂತಿಗೆ ತೆರೆ ಬಿದ್ದಿದೆ.
''ಡಿಸೆಂಬರ್ ವೇಳೆಗೆ ನಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಈ ಸಂದರ್ಭದಲ್ಲಿ ಮಾಧ್ಯಮದವರು, ನಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಅವರು ನೀಡುವ ಬೆಂಬಲ, ಪ್ರೀತಿಗೆ ಕೃತಜ್ಞತೆ ಹೇಳಲು ಬಯಸುತ್ತೇನೆ ಎಂದು ಹೇಳಿಕೆಯಲ್ಲಿ ಸೈಫ್ ಆಲಿಖಾನ್ ತಿಳಿಸಿದ್ದಾರೆ.
ಕರೀನಾ ಗರ್ಭಿಣಿಯಾಗಿರುವುದರಿಂದ ವಿಶ್ರಾಂತಿ ಪಡೆಯಲು ಇತ್ತೀಚೆಗೆ ದಂಪತಿ ಲಂಡನ್ ಗೆ ಹೋಗಿದ್ದರು ಎಂದು ಸುದ್ದಿಯಾಗಿತ್ತು. ಅಲ್ಲದೆ ತಮಗೆ ಬಂದಿರುವ ಹೊಸ ಚಿತ್ರದ ಆಫರ್ ನ್ನು ಕರೀನಾ ತಿರಸ್ಕರಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ಉಡ್ತಾ ಪಂಜಾಬ್ ಚಿತ್ರದಲ್ಲಿ ಕರೀನಾ ಕಪೂರ್ ನಟಿಸಿದ್ದಾರೆ.
ಐದು ವರ್ಷಗಳ ಕಾಲ ಪ್ರೀತಿಸಿದ ನಂತರ ಕರೀನಾ ಮತ್ತು ಸೈಫ್ ಆಲಿಖಾನ್ 2012ರಲ್ಲಿ ವಿವಾಹವಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ