ದಕ್ಷಿಣ ಭಾರತದ ಸಿನೆಮಾರಂಗದಲ್ಲಿ ಕ್ಯಾಸ್ಟಿಂಗ್ ಕೌಚ್ ಕಂಡೆ; ಬಾಲಿವುಡ್ ನಲ್ಲಲ್ಲ: ಸುರ್ವೀನ್

ಕ್ಯಾಸ್ಟಿಂಗ್ ಕೌಚ್ (ನಟಿಯರಿಂದ ಲೈಂಗಿಕ ದುರುಪಯೋಗ ಪಡೆಯುವುದಕ್ಕೆ ಬಳಸುವ ಪದ) ಬಗ್ಗೆ ಸಾರ್ವಜನಿಕವಾಗಿ ನಟಿಯರು ಮಾತನಾಡುವುದು ವಿರಳ ಆದರೆ ನಟಿ ಸುರ್ವೀನ್ ಚಾವ್ಲಾ
ನಟಿ ಸುರ್ವೀನ್ ಚಾವ್ಲಾ
ನಟಿ ಸುರ್ವೀನ್ ಚಾವ್ಲಾ
ನವದೆಹಲಿ: ಕ್ಯಾಸ್ಟಿಂಗ್ ಕೌಚ್ (ನಟಿಯರಿಂದ ಲೈಂಗಿಕ ದುರುಪಯೋಗ ಪಡೆಯುವುದಕ್ಕೆ ಬಳಸುವ ಪದ) ಬಗ್ಗೆ ಸಾರ್ವಜನಿಕವಾಗಿ ನಟಿಯರು ಮಾತನಾಡುವುದು ವಿರಳ ಆದರೆ ನಟಿ ಸುರ್ವೀನ್ ಚಾವ್ಲಾ ಕ್ಯಾಸ್ಟಿಂಗ್ ಕೌಚ್ ಅನ್ನು ದಕ್ಷಿಣ ಭಾರತದ ಸಿನೆಮಾಗಳಲ್ಲಿ ಎದುರಿಸಿದ್ದೇನೆ ಆದರೆ ಬಾಲಿವುಡ್ ನಲ್ಲಲ್ಲ ಎಂದಿದ್ದಾರೆ.
"ನಾನು ಇಲ್ಲಿ (ಬಾಲಿವುಡ್) ಇದನ್ನು (ಕ್ಯಾಸ್ಟಿಂಗ್ ಕೌಚ್) ಎದುರಿಸಬೇಕಿರಲಿಲ್ಲ ಎಂಬುದು ಸಂತಸದ ಸಂಗತಿ. ಆದರೆ ಇದನ್ನು ದಕ್ಷಿಣ ಭಾರತದಲ್ಲಿ ಎದುರಿಸಬೇಕಾಯಿತು. ಆದರೆ ನಾನದನ್ನು ನಿರಾಕರಿಸಿದೆ.. ಪ್ರಾಮಾಣಿಕವಾಗಿ ಬಾಲಿವುಡ್ ನಲ್ಲಿ ಅದನ್ನು ಕಂಡಿದ್ದರಷ್ಟೇ ನಾನು ಪ್ರತಿಕ್ರಿಯಿಸಬಹುದು. ನನಗೆ ಗೊತ್ತಿಲ್ಲ, ಅದು ಕೇವಲ ಅದೃಷ್ಟವು ಇರಬಹುದು" ಎಂದು ಸುರ್ವೀನ್ ಹೇಳಿದ್ದಾರೆ. 
ನಾನೆಂದು ನಟನೆ ಸಿಗಬೇಕೆಂದು ಹಾತೊರಿದಿದ್ದಿಲ್ಲ ಬದಲಾಗಿ ಕೆಲಸ ಮಾಡುವ ಆಸೆ ಇತ್ತು ಎಂದು ನಟಿ ಹೇಳಿದ್ದಾರೆ. 
ದಶಕಗಳ ಹಿಂದೆ ಬಾಲಿವುಡ್ ನಲ್ಲಿ ಕ್ಯಾಸ್ಟಿಂಗ್ ಕೌಚ್ ಸಂಗತಿ ಇತ್ತು ಎನ್ನುವ ನಟಿ "ನನ್ನ ಅನುಭವದ ಮೂಲಕವಷ್ಟೇ ನಾನು ಮಾತನಾಡಬಲ್ಲೆ.  ಬಾಲಿವುಡ್ ನಲ್ಲಿ ನನಗೆ ಅಂತಹ ಅನುಭವಗಳು ಆಗಿಲ್ಲ" ಎಂದು ಅವರು ತಿಳಿಸಿದ್ದಾರೆ. 
ಬಾಲಿವುಡ್ ಸಾಕಷ್ಟು ಮುಂದುವರೆದಿದ್ದು, ನಟನೆಯ ಕೌಶಲ್ಯ ನೋಡಿ ಅವಕಾಶಗಳು ಸಿಗುತ್ತಿವೆ ಎನ್ನುತ್ತಾರೆ ಸುರ್ವೀನ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com