
ಮುಂಬೈ: ರಜನಿಕಾಂತ್ ಅಭಿನಯದ ಕಬಾಲಿ ಚಿತ್ರವನ್ನು ಮತ್ತೊಮ್ಮೆ ಹಿಂದಿಯಲ್ಲಿ ರಿಮೇಕ್ ಮಾಡಿ ರಜನಿ ಪಾತ್ರಕ್ಕೆ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ರನ್ನು ಕರೆತರಲು ಎಲ್ಲ ತಯಾರಿ ನಡೆದಿದೆ ಎನ್ನಲಾಗಿದೆ.
ಕಬಾಲಿ ಹಿಂದಿಯಲ್ಲಿ ಡಬ್ ಆಗಿದ್ದರೂ, ನಿಗದಿತ ಪ್ರಮಾಣದ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರಲು ಸಾಧ್ಯವಾಗಿಲ್ಲ ಎಂಬುದನ್ನು ಮನಗಂಡು ಹಿಂದಿಯಲ್ಲೆ ಕಬಾಲಿ ನಿರ್ಮಿಸುವ ಯೋಜನೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರಪಂಚದಾದ್ಯಂತ 12 ಸಾವಿರ ಸ್ಕ್ರೀನ್ಗಳಲ್ಲಿ ಕಬಾಲಿ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಹೆಚ್ಚಿನ ಜನ ತಮಿಳಿನಲ್ಲೆ ಚಿತ್ರ ವೀಕ್ಷಿಸಲು ಅಪೇಕ್ಷಿಸಿದ್ದಾರೆ. ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಮಲಯ ಭಾಷೆಗಳಲ್ಲಿ ಕಬಾಲಿ ಡಬ್ ಆಗಿದೆ.
Advertisement