ನಟ ಸಲ್ಮಾನ್ ಖಾನ್ ಮತ್ತು ನಿರ್ದೇಶಕ ಕಬೀರ್ ಖಾನ್ (ಚಿತ್ರಕೃಪೆ: ಕಬೀರ್ ಖಾನ್ ಟ್ವಿಟ್ಟರ್ ಖಾತೆ)
ಬಾಲಿವುಡ್
ಸಲ್ಮಾನ್ ಖಾನ್ 'ಟ್ಯೂಬ್ ಲೈಟ್' ಚಿತ್ರೀಕರಣ ಪ್ರಾರಂಭಿಸಿದ ಕಬೀರ್ ಖಾನ್
ನಿರ್ದೇಶಕ ಕಬೀರ್ ಖಾನ್ ತಮ್ಮ ಮುಂದಿನ ಚಿತ್ರ 'ಟ್ಯೂಬ್ ಲೈಟ್' ಚಿತ್ರೀಕರಣವನ್ನು ಲಡಾಕ್ ನಲ್ಲಿ ಪ್ರಾರಂಭಿಸಿದ್ದಾರೆ. ಈ ಸಿನೆಮಾದ ನಾಯಕ ನಟ ಸಲ್ಮಾನ್ ಖಾನ್.
ಮುಂಬೈ: ನಿರ್ದೇಶಕ ಕಬೀರ್ ಖಾನ್ ತಮ್ಮ ಮುಂದಿನ ಚಿತ್ರ 'ಟ್ಯೂಬ್ ಲೈಟ್' ಚಿತ್ರೀಕರಣವನ್ನು ಲಡಾಕ್ ನಲ್ಲಿ ಪ್ರಾರಂಭಿಸಿದ್ದಾರೆ. ಈ ಸಿನೆಮಾದ ನಾಯಕ ನಟ ಸಲ್ಮಾನ್ ಖಾನ್.
ಚಿತ್ರೀಕರಣದ ಹೊರಾಂಗಣ ಪ್ರದೇಶದ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಕಬೀರ್, ಚಿತ್ರ ತಂಡದ ವಿವರಗಳನ್ನು ಬಿಚ್ಚಿಟ್ಟಿದ್ದಾರೆ.
"ನಾಳೆ ಇಲ್ಲಿಂದ 'ಟ್ಯೂಬ್ ಲೈಟ್' ಚಿತ್ರೀಕರಣ ಪ್ರಾರಂಭವಾಗಲಿದೆ. .. ಲಡಾಕ್. 200 ಜನರ ಚಿತ್ರತಂಡ ಚಾಲನೆಗೆ ಸಿದ್ಧವಿದೆ" ಎಂದು ಕಬೀರ್ ಬುಧವಾರ ಟ್ವೀಟ್ ಮಾಡಿದ್ದಾರೆ.
#Tubelight shoot begins here tomorrow...
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ