
ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ತಮ್ಮ ಅಭಿನಯದ ಐತಿಹಾಸಿಕ ನಾಟಕ ಮೆಹೆಂಜೋ ದಾರೋ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.
ಮೊಹೆಂಜೊ ದಾರೊ ಮಧ್ಯಕಾಲೀನ ವಿಶ್ವಕ್ಕೆ ಸ್ವಾಗತ ಎಂದು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ. ಚಿತ್ರವನ್ನು ಲಗಾನ್ ಚಿತ್ರ ನಿರ್ದೇಶಕ ಅಶುತೋಷ್ ಗೌರೀಕರ್ ನಿರ್ದೇಶಿಸಿದ್ದಾರೆ.
ಮೆಹೆಂಜೋ ದಾರೊಗಾಗಿ ನಾನು ಹಿಂದಿನ ಕಾಲಕ್ಕೆ ಪ್ರಯಾಣಸಿದ್ದೇನೆ. ಅದೊಂದು ಅದ್ಭುತ ಪಯಣ ಮತ್ತು ಉತ್ತಮ ಅನುಭವ. ನನ್ನ ಸಿನಿಮಾ ಬದುಕಿನಲ್ಲಿ ಇದೊಂದು ಅತ್ಯುತ್ತಮ ಸಿನಿಮಾವಾಗಲಿದೆ ಎಂಬ ನಂಬಿಕೆ ನನ್ನದು ಎಂದು ಹೇಳಿಕೊಂಡಿದ್ದ ಹೃತಿಕ್ ಇದೀಗ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಹೃತಿಕ್ ರೋಷನ್ ಗೆ ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ.
2016ರ ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಮೆಹೆಂಜೋದಾರೊ ಚಿತ್ರವನ್ನು ಸುನಿತ ಗೌರೀಕರ್ ಮತ್ತು ಡಿಸ್ನಿಯ ಸಿದ್ಧಾರ್ಥ ರಾಯ್ ಕಪೂರ್ ನಿರ್ಮಿಸಿದ್ದಾರೆ.
Advertisement