ನಾನು ಬೇಡದ ಮಗುವಾಗಿದ್ದೆ: ಕಂಗನಾ ರನೌತ್

ಹಲವಾರು ಪ್ರಶಸ್ತಿಗಳನ್ನು ಗೆದ್ದಿರಬಹುದು, ಸಾವಿರಾರು ಅಭಿಮಾನಿಗಳ ಹೃದಯದಲ್ಲಿ ನೆಲೆಸಿರಬಹುದು ಆದರೆ ಬಾಲಿವುಡ್ ನಟಿ ಕಂಗನಾ ರನೌತ್ ತಮ್ಮ ಬಾಲ್ಯದ ಬಗ್ಗೆ ಹೇಳಿಕೊಂಡಿದ್ದು,
ನಟಿ ಕಂಗನಾ ರನೌತ್
ನಟಿ ಕಂಗನಾ ರನೌತ್

ಮುಂಬೈ: ಹಲವಾರು ಪ್ರಶಸ್ತಿಗಳನ್ನು ಗೆದ್ದಿರಬಹುದು, ಸಾವಿರಾರು ಅಭಿಮಾನಿಗಳ ಹೃದಯದಲ್ಲಿ ನೆಲೆಸಿರಬಹುದು ಆದರೆ ಬಾಲಿವುಡ್ ನಟಿ ಕಂಗನಾ ರನೌತ್ ತಮ್ಮ ಬಾಲ್ಯದ ಬಗ್ಗೆ ಹೇಳಿಕೊಂಡಿದ್ದು, ಬೇಡವಾಗಿದ್ದ ಮಗುವಿನಿಂದ ಬೆಳೆದುಬಂದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಅಂತರಾಷ್ಟ್ರೀಯ ಮಹಿಳಾ ದಿನವಾದ ನೆನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ  ಅವರು, ಪುರುಷರ ಸಂತಸಕ್ಕಾಗಿ ಮಹಿಳೆಯರ ತ್ಯಾಗವನ್ನು ಬಣ್ಣಿಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.

"ರಂಗೋಲಿಗೂ(ಅಕ್ಕ) ಮುಂಚಿತವಾಗಿ ನನ್ನ ಪೋಷಕರಿಗೆ ಒಂದು ಮಗುವಾಗಿತ್ತು. ಆದರೆ ಅವನು ಜನಿಸಿದ ೧೦ ದಿನಗಳಲ್ಲಿ ಮೃತಪಟ್ಟ. ಅವನನ್ನು ಹೀರೋ ಎಂದು ಕರೆಯಲಾಗಿತ್ತು. ಅವನನ್ನು ಕಳೆದುಕೊಂಡ ದುಃಖದಿಂದ ನನ್ನ ಪೋಷಕರಿಗೆ ಹೊರಬರಲು ಸಾಧ್ಯವಾಗಲೇ ಇಲ್ಲ. ನಂತರ ರಂಗೋಲಿ ಹುಟ್ಟಿದ ಮೇಲೆ ಸಂಭ್ರಮಗಳಿದ್ದವು" ಎಂದು 'ಕಟ್ಟಿ ಬಟ್ಟಿ'  ನಟಿ ಹೇಳಿದ್ದಾರೆ.

ಹಿರಿಯ ಅಕ್ಕ ರಂಗೋಲಿ ಜನಿಸಿದ ಮೇಲೆ ಮತ್ತೊಂದು ಹೆಣ್ಣು ಮಗು ಜನಿಸಿದ್ದಕ್ಕೆ ಅವರ ಪೋಷಕರು ಬೇಸರದಿಂದ ಹೊರಬರಲು ಸಾಧ್ಯವಾಗಲೇ ಇಲ್ಲ ಎಂದಿದ್ದಾರೆ ನಟಿ.

"ನಾನು ಜನಿಸಿದಾಗ, ನನ್ನ ಪೋಷಕರಿಗೆ, ಅದರಲ್ಲೂ ನನ್ನ ತಾಯಿಗೆ ಮತ್ತೊಂದು ಹೆಣ್ಣು ಮಗು ಜನಿಸಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಈ ಕಥೆಗಳೆಲ್ಲ ವಿವರವಾಗಿ ನನಗೆ ತಿಳಿದಿದೆ, ಏಕೆಂದರೆ ಪ್ರತಿ ಬಾರಿ ಅತಿಥಿಗಳು ಮನೆಗೆ ಬಂದಾಗ, ಅಥವಾ ಮನೆಯ ಕಾರ್ಯಕ್ರಮಗಳಲ್ಲಿ ನಾನು ಹೇಗೆ ಬೇಡವಾಗಿದ್ದ ಮಗುವಾಗಿದ್ದೆ ಎಂಬ ಕಥೆಯನ್ನು ನನ್ನ ಮುಂದೆಯೇ ಪದೇ ಪದೇ ಹೇಳಲಾಗುತ್ತಿತ್ತು" ಎಂದು ಕಂಗನಾ ಹೇಳಿದ್ದಾರೆ.

"ನಿಮ್ಮ ಅಸ್ತಿತ್ವದ ಅವಶ್ಯಕತೆಯನ್ನು ಸದಾ ಪ್ರಶ್ನಿಸುವ ವಾತಾವರಣದಲ್ಲಿ ಬದುಕಲು ಕಷ್ಟ" ಎಂದಿದ್ದಾರೆ 'ತನು ವೆಡ್ಸ್ ಮನು ರಿಟರ್ನ್ಸ್' ಖ್ಯಾತಿಯ ನಟಿ.

ಹುಡುಗಿಯರಿಗಿಂತಲೂ ಹುಡುಗರು ಮೇಲು ಎಂಬುದನ್ನು ತಾನೆಂದು ಒಪ್ಪಿಕೊಳ್ಳಲೇ ಇಲ್ಲ ಎನ್ನುತಾರೆ ಕಂಗನಾ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com