
ನವದೆಹಲಿ: ನಿಯಮಿತ ಓವರ್ ಗಳ ಭಾರತೀಯ ಕ್ರಿಕೆಟ್ ನ ನಾಯಕ ಎಂ ಎಸ್ ಧೋನಿ ಅವರ ಬಯೋಪಿಕ್ 'ಎಂ ಎಸ್ ಧೋನಿ- ದ ಅನ್ ಟೋಲ್ಡ್ ಸ್ಟೋರಿ' ಸಿನೆಮಾದ ಭಿತ್ತಿಚಿತ್ರವನ್ನು, ಧೋನಿ ಪಾತ್ರದಲ್ಲಿ ನಟಿಸುತ್ತಿರುವ ನಟ ಸುಶಾಂತ್ ಸಿಂಗ್ ರಜಪೂತ್ ಟ್ವಿಟ್ಟರ್ ನಲ್ಲಿ ಅನಾವರಣ ಮಾಡಿದ್ದಾರೆ.
"ನಿಮಗೆ ಗೊತ್ತಿರುವ ಮನುಷ್ಯ. ನಿಮಗೆ ಗೊತ್ತಿರದ ಪಯಣ. ಅವರ ಕಥೆ ನಿಮಗೆ ತಿಳಿದಿರಲೇ ಬೇಕು #ಎಂ ಎಸ್ ಧೋನಿ ದ ಅನ್ ಟೋಲ್ಡ್ ಸ್ಟೋರಿ" ಎಂದು ಸುಶಾಂತ್ ಸಿನೆಮಾದ ಭಿತ್ತಿಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ.
Advertisement