
ಮುಂಬೈ: ಭಾರತ್ ಮಾತಾ ಕಿ ಜೈ ವಿವಾದಕ್ಕೆ ಸಂಬಂಧಿಸಿ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ್ದ ಹೇಳಿಕೆಯನ್ನು ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಪ್ರಶಂಸಿಸಿದ್ದಾರೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಈ ಹಿಂದೆ ಮೋಹನ್ ಭಾಗವತ್ ಅವರು ಭಾರತ್ ಮಾತಾ ಕಿ ಜೈ ಎಂದು ಯಾರ ಮೇಲೂ ಒತ್ತಡ ಹೇರಬಾರದು. ಜನರು ತಮಗೆ ತಾವೇ ಘೋಷಣೆ ಕೂಗುವಂತಹ ವರ್ತನೆ ನಮ್ಮಲ್ಲಿರಬೇಕೆಂದು ಹೇಳಿದ್ದರು.
2/3: Salaam Bhagwat Saab! Lot of people say with pride that they haven't changed. That means they are not growing.
— Salim Khan (@luvsalimkhan) March 29, 2016
Advertisement