ಕಂಗನಾ ರಣಾವತ್
ಬಾಲಿವುಡ್
ಸಣ್ಣ ನಗರದಿಂದ ಬಂದು ದೊಡ್ಡ ಕನಸು ಕಂಡು, ಸಾಕಾರಗೊಳಿಸಲು ನಿರ್ಧರಿಸಿದ್ದೇನೆ: ಕಂಗನಾ ರಣಾವತ್
ಸಣ್ಣ ನಗರದಿಂದ ಬಂದ ದೊಡ್ಡ ದೊಡ್ಡ ಕನಸುಗಳನ್ನು ಕಂಡೆ. ನನ್ನ ಕನಸುಗಳನ್ನು ಸಾಕಾರಗೊಳಿಸಲು ಧೈರ್ಯ, ಧೃಡ ನಿರ್ಧಾರಗಳನ್ನು ಹೊಂದಿದ್ದೇನೆ
ಮುಂಬಯಿ: ಸಣ್ಣ ನಗರದಿಂದ ಬಂದ ದೊಡ್ಡ ದೊಡ್ಡ ಕನಸುಗಳನ್ನು ಕಂಡೆ. ನನ್ನ ಕನಸುಗಳನ್ನು ಸಾಕಾರಗೊಳಿಸಲು ಧೈರ್ಯ, ಧೃಡ ನಿರ್ಧಾರಗಳನ್ನು ಹೊಂದಿದ್ದೇನೆ ಎಂದು ಬಾಲಿವುಡ್ 'ಕ್ವೀನ್' ಕಂಗನಾ ರಣಾವತ್ ಹೇಳಿದ್ದಾರೆ.
ರೀಬಾಕ್ ಇಂಡಿಯಾದ ಅಂಬಾಸಿಡರ್ ಆಗಿರುವ ಕಂಗನಾ ಕಂಗನಾ ಮಹಿಳೆಯ ಇತಿಹಾಸ, ಧೈರ್ಯ, ಸಾಧನೆ ಹಾಗೂ ಪ್ರೋತ್ಸಾಹದ ಕುರಿತ ವಿಡಿಯೋ ಶೂಟಿಂಗ್ ಮಾಡಿದ್ದಾರೆ.
ರೀಬಾಕ್ ಇಂಡಿಯಾದ ಅಂಬಾಸಿಡರ್ ಆಗಿದ್ದೇನೆ. ಈ ಮೂಲಕ ನಾನು ಮಹಿಳೆಯರ ಸ್ಥೈರ್ಯವನ್ನು ಬೆಂಬಿಸಲು ಮುಂದಾಗಿದ್ದೇನೆ ಎಂದಿರುವ ಅವರು, ಮಹಿಳೆಯರು ತಮ್ಮ ಸ್ಟೋರಿಗಳನ್ನು ಶೇರ್ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ನಾನು ಸಣ್ಣ ನಗರದಿಂದ ಬಂದವಳು. ನಾನೊಬ್ಬಳೇ ಅಲ್ಲ ಹಲವರು ತಮ್ಮ ಜೀವನದಲ್ಲಿ ಹಲವು ಅಡೆತಡೆಗಳನ್ನು ಎದುರಿಸಿ ಮುಂದೆ ಬಂದಿದ್ದಾರೆ. ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಸಬಲರಾಗಿರಬೇಕು ಎಂಬುವುದರಲ್ಲಿ ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ