
ರೋಮಾನಿಯಾದ ಲೂಲಿಯಾ ವಂತೂರ್ ಜತೆ ಡಿಸೆಂಬರ್ 27ಕ್ಕೆ ಮದುವೆ ನಡೆದು ಬಾಲಿವುಡ್ ನಟ ಸಲ್ಮಾನ್ ಖಾನ್ರ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪಟ್ಟ ಕಳಚಲಿದೆ ಎಂಬ ಸುದ್ದಿಗಳ ಹರಿದಾಟದ ನಡುವೆ ಲೂಲಿಯಾ ಸಲ್ಮಾನ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾಳೆ.
ಹೌದು! ಲೂಲಿಯಾ ತಾನು ಇಷ್ಟು ಬೇಗ ಮದುವೆಯಾಗಿ ಸೆಟಲ್ ಆಗುವ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದ್ದಾರೆ. ಇನ್ನು ತನ್ನನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳಿಗೆ ತೆರೆ ಎಳೆದಿರುವ ಅವರು, ನಾನು ಯಾರೊಂದಿಗೂ ಮದುವೆಯಾಗುತ್ತಿಲ್ಲ ಇದೆಲ್ಲಾ ವದಂತಿಗಳು ಎಂದು ಸಾಮಾಜಿಕ ಜಾಲತಾಣ ಟ್ವೀಟರ್ ಮತ್ತು ಇನ್ ಸ್ಟ್ರಾಗಾಂನಲ್ಲಿ ಸ್ಪಷ್ಟಪಡಿಸಿದ್ದಾರೆ.
ಲೂಲಿಯಾ ತಮ್ಮ ಪೋಸ್ಟ್ ನಲ್ಲಿ: ಪ್ರಿಯ ಸ್ನೇಹಿತರೇ, ಸಲ್ಮಾನ್ ಖಾನ್ ನನ್ನ ಕೈಹಿಡಿಯಲಿದ್ದಾರೆ ಎಂಬ ಗಾಳಿ ಸುದ್ದಿಗೆ ನಾನು ಸ್ಪಂದಿಸಬೇಕು ಎಂಬ ಅನಿವಾರ್ಯತೆ ಇರಲಿಲ್ಲ. ಆದರೂ ಕೆಲ ವಿಚಾರಗಳಿಗೆ ನಾನೇ ಸ್ಪಷ್ಟನೆ ನೀಡಬೇಕಿದೆ. ಅದರಂತೆ ನಾನು ಯಾರನ್ನು ಮದುವೆಯಾಗುವುದಿಲ್ಲ. ಮದುವೆ ಉಡುಪನ್ನು ಧರಿಸುವ ಆತುರ ನನಗಿಲ್ಲ ಎಂದು ಟ್ವೀಟಿಸಿದ್ದಾರೆ.
ಇನ್ನು ಲೂಲಿಯಾ ಹಾಗೂ ಸಲ್ಮಾನ್ ಖಾನ್ ಡೇಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಇದೇ ವರ್ಷಾಂತ್ಯದಲ್ಲಿ ಈ ಜೋಡಿ ಮದುವೆಯಾಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು.
Advertisement