ಸುದ್ದಿಯಾಗುವುದಕ್ಕೋಸ್ಕರ ಐಶ್ವರ್ಯಾ ನೇರಳೆ ಲಿಪ್‌ಸ್ಟಿಕ್ ಹಚ್ಚಿದ್ದರು: ಸೋನಂ ಕಪೂರ್

ಕ್ಯಾನೆ ಫಿಲ್ಮ್ ಫೆಸ್ಟಿವಲ್ ನಲ್ಲಿ ನಟಿ ಐಶ್ವರ್ಯಾ ರೈ ಹಚ್ಚಿಕೊಂಡಿದ್ದ ನೇರಳೆ ಬಣ್ಣದು ಲಿಪ್ ಸ್ಟಿಕ್ ಸುದ್ದಿಗೆ ಗ್ರಾಸವಾಗಿದ್ದು ಮಾತ್ರವಲ್ಲದೆ ಸೋಷ್ಯಲ್ ಮೀಡಿಯಾದಲ್ಲಿ ...
ಐಶ್ವರ್ಯಾ ರೈ ಬಚ್ಚನ್ - ಸೋನಂ ಕಪೂರ್
ಐಶ್ವರ್ಯಾ ರೈ ಬಚ್ಚನ್ - ಸೋನಂ ಕಪೂರ್
ಮುಂಬೈ: ಕ್ಯಾನೆ ಫಿಲ್ಮ್ ಫೆಸ್ಟಿವಲ್ ನಲ್ಲಿ ನಟಿ ಐಶ್ವರ್ಯಾ ರೈ ಹಚ್ಚಿಕೊಂಡಿದ್ದ ನೇರಳೆ ಬಣ್ಣದು ಲಿಪ್ ಸ್ಟಿಕ್ ಸುದ್ದಿಗೆ ಗ್ರಾಸವಾಗಿದ್ದು ಮಾತ್ರವಲ್ಲದೆ ಸೋಷ್ಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿತ್ತು. 
ಇದೀಗ ಐಶ್ವರ್ಯಾಳ ಲಿಪ್‌ಸ್ಟಿಕ್ ಬಗ್ಗೆ ಬಾಲಿವುಡ್ ನಟಿ ಸೋನಂ ಕಪೂರ್ ಪ್ರತಿಕ್ರಿಯೆ ನೀಡಿ ಸುದ್ದಿಯಾಗಿದ್ದಾಳೆ.
ಫ್ಯಾಷನ್ ಮತ್ತು ಮೇಕಪ್ ಅಂದ್ರೆ ಅದನ್ನು ನೋಡಿ ಜನರು ಚರ್ಚಿಸಬೇಕು ಎಂಬುದು ಅದನ್ನು ಧರಿಸುವವರ ಉದ್ದೇಶವಾಗಿರುತ್ತದೆ. ಐಶ್ವರ್ಯಾಳಿಗೂ ಇದೇ ಇಚ್ಛೆ ಇದ್ದಿರಬೇಕು. ಅದಕ್ಕಾಗಿಯೇ ಆಕೆ ನೇರಳೆ ಬಣ್ಣ ಹಚ್ಚಿ ಗಮನ ಸೆಳೆದರು. ಆಕೆಗೆ ಬೇಕಾಗಿರುವುದನ್ನು ಆಕೆ ಸಾಧಿಸಿಕೊಂಡಿದ್ದಾಳೆ ಎಂದು ಸೋನಂ ಕಪೂರ್ ಹೇಳಿದ್ದಾಳೆ.
ಆದಾಗ್ಯೂ, ನೀವೂ ಇದೇ ಬಣ್ಣದ ಲಿಪ್ ಸ್ಟಿಕ್ ಟ್ರೈ ಮಾಡಿದ್ದೀರಾ ಎಂದು ಕೇಳಿದ್ದಕ್ಕೆ, ನಾನು ಈ ಹಿಂದೆಯೇ ನೇರಳೆ ಬಣ್ಣದ ಲಿಪ್‌ಸ್ಟಿಕ್ ಟ್ರೈಮಾಡಿದ್ದೆ. ಶೂಟಿಂಗ್ ಒಂದರಲ್ಲಿ ನಾನು ಕಪ್ಪು ಬಣ್ಣವನ್ನೂ  ಹಚ್ಚಿದ್ದೆ. ಆದರೆ ಜನರು ಯಾರೂ ನನ್ನ ಬಗ್ಗೆ ಮಾತನಾಡಲೇ ಇಲ್ಲ ಎಂದು ಉತ್ತರಿಸಿದ್ದಾರೆ. 
ಕ್ಯಾನೆ ಫೆಸ್ಟಿವೆಲ್‌ನಲ್ಲಿ ಸೋನಂ ಧರಿಸಿದ್ದ ದೊಡ್ಡ ಗೌನ್ ಕೂಡಾ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com