ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಸ್ನೇಹದಲ್ಲಿ ಬಿರುಕು?!

ಬಾಲಿವುಡ್ ಸೂಪರ್ ಸ್ಟಾರ್ ಗಳಾದ ನಂಜಯ್ ದತ್ ಮತ್ತು ಸಲ್ಮಾನ್ ಖಾನ್ ನಡುವಿನ ಸ್ನೇಹದಲ್ಲಿ ಬಿರುಕು ಉಂಟಾಗಿದೆ ಎಂದು ಆಂಗ್ಲ ಭಾಷೆ ವೆಬ್ ಸೈಟ್ ...
ಸಲ್ಮಾನ್ ಖಾನ್ ಮತ್ತು ಸಂಜಯ್ ದತ್
ಸಲ್ಮಾನ್ ಖಾನ್ ಮತ್ತು ಸಂಜಯ್ ದತ್
Updated on

ಮುಂಬಯಿ: ಬಾಲಿವುಡ್ ಸೂಪರ್ ಸ್ಟಾರ್ ಗಳಾದ ನಂಜಯ್ ದತ್ ಮತ್ತು ಸಲ್ಮಾನ್ ಖಾನ್ ನಡುವಿನ ಸ್ನೇಹದಲ್ಲಿ ಬಿರುಕು ಉಂಟಾಗಿದೆ ಎಂದು ಆಂಗ್ಲ ಭಾಷೆ ವೆಬ್ ಸೈಟ್ ವರದಿ ಮಾಡಿದೆ.

ಎರಡೂವರೆ ದಶಕಗಳ ಕಾಲದ ಈ  ಇಬ್ಬರ ಸ್ನೇಹ ಸಂಬಂಧ ಕಾರಣಾಂತರಗಳಿಂದ ಹಳಸಿದೆ ಎನ್ನಲಾಗಿದೆ.

ಸಲ್ಮಾನ್ ಖಾನ್  ಸೂಚಿಸಿದ್ದ ಮ್ಯಾನೇಜರ್ ನನ್ನು ಸಂಜಯ್ ದತ್ ಕೆಲಸದಿಂದ ಕಿತ್ತು ಹಾಕಿದ್ದೆ ಇನರಿಬ್ಬರ ಸಂಬಂಧ ಹಳಸಲು ಪ್ರಮುಖ ಕಾರಣವಾಗಿದೆ.

ಸಂಜಯ್ ದತ್ ಯೆರವಾಡ ಜೈಲಿನಿಂದ ಬಿಡುಗಡೆಯಾದ ನಂತರ ಒಳ್ಳೆಯ ಕೆಲಸಗಳಿಗೆ ಅನುಕೂಲವಾಗಲಿ ಎಂದು ಮ್ಯಾನೇಜರ್ ಒಬ್ಬನನ್ನು ತಂದು ಸಂಜಯ್ ದತ್ ಬಳಿ ಕೆಲಸಕ್ಕೆ ಇರಿಸಿದ್ದರು. ಆದರೆ ಆ ಮ್ಯಾನೇಜರ್ ನಿರ್ಮಾಪಕರುಗಳಿಂದ ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದುದಾಗಿ ಹೇಳಿ ಆತನನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ.

ಇದರಿಂದ ಸಲ್ಮಾನ್ ಖಾನ್ ಬೇಸರಗೊಂಡು ಸಂಜಯ್ ದತ್ ಮೇಲೆ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಂಜಯ್ ಮತ್ತು ಸಲ್ಮಾನ್ ಖಾನ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಜೊತೆಗೆ ಬಿಗ್ ಬಾಸ್ ನ ಸೀಸನ್ ವೊಂದರಲ್ಲಿ ಇಬ್ಬರು ಆತಿಥ್ಯ ವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com