
ನವದೆಹಲಿ: ಬಾಲಿವುಡ್ ತಾರಾ ದಂಪತಿಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಮದುವೆಯಾದ ಮೂರುವರೆ ವರ್ಷಗಳ ಬಳಿಕ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಮೂಲಗಳ ಪ್ರಕಾರ ಕರೀನಾ ಬೇಗಂ ಹಾಗೂ ಸೈಫ್ ಅಲಿ ಖಾನ್ ಮೊದಲನೇಯ ಮಗುವಿಗಾಗಿ ಕಾತುರದಲ್ಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಮೊನ್ನೆ ಲಂಡನ್ ವೇಕೆಷನ್ ಮುಗಿಸಿಕೊಂಡು ಬಂದಿದ್ದಾರೆ ಸೈಫ್ ಕರೀನಾ,
'ತಶಾನ್' ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಬಳಿಕ 2012ರಲ್ಲಿ ಅಕ್ಟೋಬರ್‌ನಲ್ಲಿ ಈ ಜೋಡಿ ವಿವಾಹವಾಗಿತ್ತು.
ಇನ್ನೂ ಸೈಫ್ ಹಾಗೂ ಕರೀನಾ ಲಂಡನ್ ವೆಕೆಷನ್‌ನನ್ನು ಎಂಜಾಯ್ ಮಾಡಿದ್ದಾರೆ. ಈ ವೇಳೆ ಸೈಫ್ ಹಾಗೂ ಕರೀನಾ ಲಂಡನ್‌ನ ಹಲವು ಸ್ಥಳಗಳಿಗೆ ತೆರಳಿದ್ದರು. ರಜೆಗಾಗಿ ಅಲ್ಲ, ಕರೀನಾ ವಿಶ್ರಾಂತಿಗಾಗಿ ಲಂಡನ್ ಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ. ಮಗುವಿನ ಬಗ್ಗೆ ಕರೀನಾ ಮತ್ತು ಸೈಫ್ ಅಲಿಖಾನ್ ಎಲ್ಲಿಯೂ ತುಟಿ ಬಿಚ್ಚಿಲ್ಲ.
Advertisement