ಕಡಿಮೆ ಬಜೆಟ್ ನಲ್ಲಿ ಸಿನಿಮಾ ನಿರ್ದೇಶಿಸುವ ಬಾಲಿವುಡ್ ನ ಖ್ಯಾತ ನಿರ್ದೇಶಕ ಇದೀಗ ಹಾಲಿವುಡ್ ಗೆ ಹಾರುತ್ತಿದ್ದು ಅವರ ಮುಂದಿನ ಸಿನಿಮಾದ ಬಜೆಟ್ ಕೇಳಿದರೆ ಬೆಚ್ಚಿ ಬೀಳಲಿದ್ದೀರಿ.
ನ್ಯೂಕ್ಲಿಯರ್ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ವರ್ಮಾ ನಿನ್ನೆ ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಚಿತ್ರದ ಕುರಿತು ಘೋಷಿಸಿದ್ದು, ಅದರ ಬಜೆಟ್ 340 ಕೋಟಿ ರುಪಾಯಿ ಆಗಲಿದೆಯಂತೆ.
ಭಯೋತ್ಪಾದನೆಯ ಅಂಶವನ್ನು ಇಟ್ಟುಕೊಂಡು ಚಿತ್ರ ನಿರ್ದೇಶನಕ್ಕೆ ರಾಮ್ ಗೋಪಾಲ್ ವರ್ಮಾ ಮುಂದಾಗುತ್ತಿದ್ದು, ಅಮೆರಿಕಾ, ಚೀನಾ, ರಷ್ಯಾ, ಯೆಮೆನ್ ಮತ್ತು ಭಾರತದಲ್ಲಿ ಚಿತ್ರವನ್ನು ಚಿತ್ರೀಕರಿಸಲಿದ್ದಾರಂತೆ.