
ನವದೆಹಲಿ: ಬಾಲಿವುಡ್ ನಲ್ಲಿ ನಾನು ಈ ಮಟ್ಟಿಗೆ ತಳವೂರಲು ಕಾರಣಾದ ವ್ಯಕ್ತಿಯ ಬಗ್ಗೆ ಸೂಪರ್ ಸ್ಟಾರ್ ಶಾರೂಖ್ ಖಾನ್ ಬಹಿರಂಗ ಪಡಿಸಿದ್ದಾರೆ.
1992 ರಲ್ಲಿ ತೆರೆಕಂಡ ದಿವಾನ ಸಿನಿಮಾ ಶಾರೂಖ್ ಖಾನ್ ಗೆ ಬಾಲಿವುಡ್ ನಲ್ಲಿ ಗಟ್ಟಿ ನೆಲೆ ಕೊಟ್ಟಿತು. ಆದರೆ ಈ ಸಿನಿಮಾದಲ್ಲಿ ನಟಿಸಲು ಮೊದಲಿಗೆ ಶಾರೂಖ್ ಖಾನ್ ಗೆ ಅವಕಾಶ ಬಂದಿರಲಿಲ್ಲ ಎಂಬುದನ್ನು ಸ್ವತಃ ಅವರೇ ತಿಳಿಸಿದ್ದಾರೆ.
ದಿವಾನ ಸಿನಿಮಾದಲ್ಲಿ ನಟಿಸಲು ಮೊದಲಿಗೆ ಆರ್ಮಾನ್ ಕೊಹ್ಲಿ ಅವರಿಗೆ ಪಾತ್ರ ನೀಡಲಾಗಿತ್ತು, ಆದರೆ ಕಾರಣಾಂತರಗಳಿಂದ ಆರ್ಮಾನ್ ಕೊಹ್ಲಿ ಆ ಚಿತ್ರದಲ್ಲಿ ನಟಿಸದೇ ಹೊರಬಿದ್ದರು, ಅದೇ ಶಾರೂಖ್ ಖಾನ್ ಗೆ ವರವಾಯ್ತು. ಹೀಗಾಗಿ ನಾನು ಇಷ್ಟು ದೊಡ್ಡ ಸ್ಟಾರ್ ಆಗಲು ಆರ್ಮಾನ್ ಕೊಹ್ಲಿ ಕಾರಣರಾಗಿದ್ದಾರೆ, ಆತನಿಗೆ ನಾನು ಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.
1992 ರಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ ದಿವಾನದಲ್ಲಿ ದುರಂತನಾಯಕಿ ದಿವ್ಯಾಭಾರತಿ ಶಾರೂಖ್ ಖಾನ್ ಗೆ ನಾಯಕಿಯಾಗಿ ನಟಿಸಿದ್ದರು.
Advertisement