ಇಂದು 'ಕುಚ್ ಕುಚ್ ಹೋತಾ ಹೈ' ನೋಡಿದರೆ ಸಿಲ್ಲಿ ಎಂದೆನಿಸುತ್ತದೆ: ಕರಣ್

ತಮ್ಮ ನಿರ್ದೇಶನದ ಮೊದಲ ಚಿತ್ರ 'ಕುಚ್ ಕುಚ್ ಹೋತಾ ಹೈ' ದೊಡ್ಡ ಹಿಟ್ ಸಿನೆಮಾ ಆಗಿದ್ದರು, ಆ ಸಿನೆಮಾವನ್ನು ಇಂದು ನೋಡಿದರೆ ಅತಿ ಪೆದ್ದುತದನದ್ದು ಎಂದೆನಿಸುತ್ತದೆ ಎಂದಿದ್ದಾರೆ ನಿರ್ದೇಶಕ
ನಿರ್ದೇಶಕ ಕರಣ್ ಜೋಹರ್
ನಿರ್ದೇಶಕ ಕರಣ್ ಜೋಹರ್
ಮುಂಬೈ: ತಮ್ಮ ನಿರ್ದೇಶನದ ಮೊದಲ ಚಿತ್ರ 'ಕುಚ್ ಕುಚ್ ಹೋತಾ ಹೈ' ದೊಡ್ಡ ಹಿಟ್ ಸಿನೆಮಾ ಆಗಿದ್ದರು, ಆ ಸಿನೆಮಾವನ್ನು ಇಂದು ನೋಡಿದರೆ ಅತಿ ಪೆದ್ದುತದನದ್ದು ಎಂದೆನಿಸುತ್ತದೆ ಎಂದಿದ್ದಾರೆ ನಿರ್ದೇಶಕ ಕರಣ್ ಜೋಹರ್.
1998 ರಲ್ಲಿ ಬಿಡುಗಡೆಯಾದ ಈ ರೊಮ್ಯಾಂಟಿಕ್ ಡ್ರಾಮಾದಲ್ಲಿ ಶಾರುಖ್ ಖಾನ್, ರಾಣಿ ಮುಖರ್ಜಿ ಮತ್ತು ಕಾಜೋಲ್ ಮುಖ್ಯ ಭೂಮಿಕೆಯಲ್ಲಿದ್ದರು. 
"ಈ ಸಿನೆಮಾದ ಥೀಮ್ ಬಹಳ ಪೆದ್ದುತನದಿಂದ ಕೂಡಿತ್ತು" ಎಂದಿರುವ ಅವರು ತಮ್ಮ 24 ವಯಸ್ಸಿನಲ್ಲಿ ರಾಜ ಕಪೂರ್, ಯಶ್ ಚೋಪ್ರಾ ಸಿನೆಮಾಗಳಿಂದ ಪ್ರಭಾವಿತನಾಗಿ ಬರೆದ ಸ್ಕ್ರಿಪ್ಟ್ ಅದು ಎನ್ನುತ್ತಾರೆ. 
"ಆ ಸಮಯದ ಸಿನೆಮಾಗಳಲ್ಲಿ ಒಂದು ರೀತಿಯ ಮುಗ್ಧತೆ ಇರುತ್ತಿತ್ತು. ಆಗ ನನಗೆ 24 ವರ್ಷ. ಈಗ ಅಂತಹ ಸಿನೆಮಾಗಳನ್ನು ಬರೆಯಲು ಸಾಧ್ಯವಿಲ್ಲ. ಇಂದು 'ಕುಚ್ ಕುಚ್ ಹೋತಾ ಹೈ' ಅಥವಾ 'ಕಭಿ ಖುಷಿ ಕಭಿ ಘಮ್' ಸಿನೆಮಾಗಳನ್ನು ನೋಡಿದರೆ ನಾನು ಈ ಸಿನೆಮಾಗಳನ್ನು ಹೇಗೆ ಬರೆದೆ? ಏಕೆ ಬರೆದೆ? ನನ್ನ ತಲೆಗೆ ಈ ಐಡಿಯಾಗಳು ಬಂದದ್ದು ಹೇಗೆ ಎಂದು ಅಚ್ಚರಿಯಾಗುತ್ತದೆ" ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com