ಮುಂಬೈ: ರಣಬೀರ್ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ ನಟ ಸಂಜಯ್ ದತ್ ಅವರ ಬಯೋಪಿಕ್ ಪ್ರಗತಿಯಲ್ಲಿದೆ ಎಂದಿದ್ದಾರೆ ನಿರ್ದೇಶಕ ವಿಧು ವಿನೋದ್ ಚೋಪ್ರಾ.
"ನನಗೆ ಸ್ಕ್ರಿಪ್ಟ್ ಒಪ್ಪಿಗೆ ಆಗದ ಹೊರತು ಮುಂದುವರೆಯುವುದಿಲ್ಲ. ಆದರೆ ಸದ್ಯಕ್ಕೆ ಎಲ್ಲವು ನಡೆಯುತ್ತಿದೆ" ಎಂದು ಚೋಪ್ರಾ ಸಿನೆಮಾದ ಪ್ರಗತಿಯ ಬಗ್ಗೆ ಹೇಳಿದ್ದಾರೆ.
ಈ ಮಧ್ಯೆ ಚೋಪ್ರಾ ಅವರ ಸಹೋದರಿ ಶೆಲ್ಲಿ ನಿರ್ದೇಶಿಸಲಿರುವ 'ಮಾರ್ಕೋ ಭಾಉ' ಸಿನೆಮಾದಲ್ಲಿ ಸಂಜಯ್ ದತ್ ನಟಿಸಲಿದ್ದಾರೆ. "ಈ ಸಿನೆಮಾದ ಬಗ್ಗೆ ಹೆಚ್ಚು ಹೇಳಲು ಸಾಧ್ಯವಿಲ್ಲ, ಏಕೆಂದರೆ ಇನ್ನು ಅಧಿಕೃತ ಘೋಷಣೆಯಾಗಬೇಕಿದೆ" ಎಂದು ಚೋಪ್ರಾ ಹೇಳಿದ್ದಾರೆ.
ಮುನ್ನಾಭಾಯಿ ಸಿನೆಮಾದ ಮೂರನೇ ಕಂತು ಕೂಡ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.