ಜನರ ಸಿಟ್ಟಿಗೆ ಕಾರಣವಾದ ಪ್ರಿಯಾಂಕಾ ಚೋಪ್ರಾರ ಮ್ಯಾಗಜೀನ್ ನ ಮುಖಪುಟ ಫೋಟೋ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಸಿಲುಕಿ ಸುದ್ದಿಯಾಗಿದ್ದಾರೆ...
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಸಿಲುಕಿ ಸುದ್ದಿಯಾಗಿದ್ದಾರೆ. ಕಾಂಡ್ ನಾಸ್ಟ್ ಟ್ರಾವಲ್ಲರ್ ಎಂಬ ಮ್ಯಾಗಜೀನ್ ನ ಅಕ್ಟೋಬರ್- ನವೆಂಬರ್ ತಿಂಗಳ ಸಂಚಿಕೆಯ ಮುಖಪುಟಕ್ಕೆ ಪ್ರಿಯಾಂಕಾ ಚೋಪ್ರಾ ಫೋಸ್ ಕೊಟ್ಟಿದ್ದು ಅದರಲ್ಲಿ ಬಿಳಿ ಬಣ್ಣದ ಟಾಪ್ ಧರಿಸಿದ್ದಾರೆ. ಅಷ್ಟೇ ಆಗಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಆ ಟೀ ಶರ್ಟ್ ನಲ್ಲಿ ರೆಫ್ಯೂಜಿ, ಇಮ್ಮಿಗ್ರೆಂಟ್ ಮತ್ತು ಔಟ್ ಸೈಡರ್ ಎಂಬ ಶಬ್ದಗಳನ್ನು ಕೆಂಪು ಬಣ್ಣದಿಂದ ಅಡ್ಡ ಗೆರೆ ಎಳೆಯಲಾಗಿದೆ. ಟ್ರಾವಲರ್ ಎಂಬ ಶಬ್ದವನ್ನು ಹಾಗೆಯೇ ಬಿಡಲಾಗಿದೆ. ಇದು ಹಲವರನ್ನು ಕೆರಳಿಸಿದೆ.
ಟ್ವಿಟ್ಟರ್  ಸಂದೇಶಕಾರರ ಪ್ರಕಾರ, ಟಾಪ್ ಮೇಲಿನ ಬರಹ ಅಸಂವೇದನಶೀಲತೆಯನ್ನು ಸಾರುತ್ತದೆ. ಜನಾಂಗೀಯ ನಿಂದನೆಗೆ ಈ ಶಬ್ದಗಳು ದಾರಿ ಮಾಡಿಕೊಡುತ್ತದೆ ಎಂದು ಹಲವರು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಡೆ ನಾಸ್ಟ್ ಟ್ರಾವೆಲ್ಲರ್ ಪತ್ರಿಕೆಯವರು ಟ್ವೀಟ್ ಮಾಡಿ, ಧೈರ್ಯಶಾಲಿ ಪ್ರಿಯಾಂಕಾ ಚೋಪ್ರಾ ನಮ್ಮ 6ನೇ ವರ್ಷದ ಸಂಚಿಕೆಗೆ ನೇರವಾದ ಮತ್ತು ಗಟ್ಟಿಯಾದ ಸಂದೇಶ ನೀಡಿದ್ದಾರೆ ಎಂದಿದೆ.
ಆದರೆ ಜನರು ಅದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿರಾಶ್ರಿತರು ಪ್ರಯಾಣಿಕರಂತೆ ತಮ್ಮ ಮನೆಗಳನ್ನು ತೊರೆದು ಬೇರೆಡೆಗೆ ಹೋಗಲು ಬಯಸುವುದಿಲ್ಲ. ಭಾರತದಲ್ಲಿ ವಾಸಿಸುತ್ತಿರುವ ನಿರಾಶ್ರಿತರಿಗೆ ಮಾಡುತ್ತಿರುವ ಅವಮಾನ ಎಂದು ಹೇಳಿದ್ದಾರೆ.
ಇನ್ನೊಬ್ಬರು ಟ್ವೀಟ್ ಮಾಡಿ, ನಿರಾಶ್ರಿತರು ಮತ್ತು ವಲಸಿಗರ ಮೇಲೆ ಪ್ರಿಯಾಂಕಾ ಚೋಪ್ರಾ ಅಸಂವೇದನಶೀಲರಾಗಿ ಮತ್ತು ಅಗೌರವ ತೋರಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಕೆಲವರು ಪ್ರಿಯಾಂಕಾ ಚೋಪ್ರಾರನ್ನು ಬೆಂಬಲಿಸಿದ್ದಾರೆ. ಒಂದು ಆದರ್ಶವಾದ ಮಾದರಿ ಜಗತ್ತಿನಲ್ಲಿ ನಿರಾಶ್ರಿತರು, ವಲಸಿಗರು, ಹೊರಗಿನವರು ಇರುವುದಿಲ್ಲ.ನಾವೆಲ್ಲರೂ ಪ್ರಯಾಣಿಕರು, ಜಾಗತಿಕ ನಾಗರಿಕರು ಎಂದು ಪ್ರಿಯಾಂಕಾರವರ ಟಿ-ಶರ್ಟ್ ನ ಶಬ್ದಗಳು ಹೇಳುತ್ತವೆ ಎಂದಿದ್ದಾರೆ.
ಯುರೋಪಿಯನ್ ಮೂಲದ ಮತ್ತು ಇತರ ವಲಸೆಗಾರರ ಗ್ರಹಿಕೆಗಳನ್ನು ವ್ಯತ್ಯಾಸಗಳು ಈ ಬರಹ, ಅಡ್ಡಗೆರೆಗಳು ಸೂಚಿಸುತ್ತವೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com