10 ವರ್ಷಗಳ ಹಿಂದೆ ನಾನು ಎಲ್ಲಿದ್ದೆ ಎಂಬುದು ನನಗೆ ಬೇಕಿಲ್ಲ: ದೀಪಿಕಾ

ಜೀವನದಲ್ಲಿ ಯಾವಾಗಲೂ ಮುಂದೆ, ಅಂದರೆ ಭವಿಷ್ಯದ ಬಗ್ಗೆ ಚಿಂತಿಸಬೇಕೆ ಹೊರತು ಹಿಂದಿನದರ ಬಗ್ಗೆ ಕುಳಿತು ಯೋಚಿಸಬಾರದು ಎಂದು ಬಾಲಿವುಡ್ ನಟಿ ದೀಪಿಕಾ...
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ
Updated on

ಮುಂಬಯಿ: ಜೀವನದಲ್ಲಿ ಯಾವಾಗಲೂ ಮುಂದೆ, ಅಂದರೆ ಭವಿಷ್ಯದ ಬಗ್ಗೆ ಚಿಂತಿಸಬೇಕೆ ಹೊರತು ಹಿಂದಿನದರ ಬಗ್ಗೆ ಕುಳಿತು ಯೋಚಿಸಬಾರದು ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.

10 ವರ್ಷಗಳ ಹಿಂದಿನ ಟಿವಿ ಶೋ ಒಂದರ ಕಾರ್ಯಕ್ರಮವನ್ನು ನೆನಪಿಸಿಕೊಳ್ಳುತ್ತಾ ಮಾತನಾಡಿರುವ ಅವರು, ಬದುಕಿನ ಪಾಠಗಳು ಹಾಗೂ ಅನುಭವಗಳೊಂದಿಗೆ  ಬೆಳೆಯಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅತಿ ಹೆಚ್ಚಿನ ಸಂಭಾವನೆ ಪಡೆಯುವ ನಟಿಯರ ಪೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದೀಪಿಕಾ ಪಡುಕೋಣೆ ಹಾಲಿವುಡ್ ಪ್ರಸಿದ್ಧ ನಟ ವಿನ್ ಡೀಸೆಲ್ ಜೊತೆ XXX ದಿ ರಿಟರ್ನ್ ಆಫ್ ದ ಕ್ಸಾಂಡರ್ ಕೇಜ್ ಚಿತ್ರದಲ್ಲಿ ಅಭಿನಯಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.

ನಾನು ಭವಿಷ್ಯದ ಬಗ್ಗೆ ಮಾತ್ರ ಚಿಂತಿಸುತ್ತೇನೆ. 10 ವರ್ಷಗಳ ಹಿಂದೆ ನಾನು ಎಲ್ಲಿದ್ದೆ, ಏನು ಮಾಡುತ್ತಿದ್ದೆ ಎಂಬುದು ಬೇಕಾಗಿಲ್ಲ, ಜೀವನದ ಅನುಭವಗಳ ಜೊತೆ ಬೆಳೆಯಬೇಕು ಎಂದು ಹೇಳಿದ್ದಾರೆ.

ಕ್ರೀಡಪಟುವಾಗಿ, ಮಾಡೆಲಿಂಗ್ ನಂತರ ನಟಿಯಾಗಿ ದೀಪಿಕಾ ಬದುಕು ರೂಪಿಸಿಕೊಂಡಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ನೀವು ಹೊಸದಾಗಿ ಏನು ಕಲಿತಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ದೀಪಿಕಾ ಇಟಾಲಿಯನ್ ಫುಡ್ ಕುಕ್ ಮಾಡುವುದನ್ನು ಕಲಿತಿರುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com