ಬಾಲಿವುಡ್
ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಸ್ಥಾನದಿಂದ ವಿವಾದಿತ ಪಹ್ಲಾಜ್ ನಿಹಲಾನಿ ವಜಾ
ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಪಹ್ಲಾಜ್ ನಿಹಲಾನಿ ಅವರನ್ನು ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಲಾಗಿದ್ದು ಅವರ ಸ್ಥಾನಕ್ಕೆ ಗೀತರಚನೆಗಾರ ಪ್ರಸೂನ್ ಜೋಶಿ ಅವರು ಆಯ್ಕೆಯಾಗುವ...
ಸೆನ್ಸಾರ್ ಬೋರ್ಡ್ ಮುಖ್ಯಸ್ಥ ಪಹ್ಲಾಜ್ ನಿಹಲಾನಿ ಅವರನ್ನು ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಲಾಗಿದ್ದು ಅವರ ಸ್ಥಾನಕ್ಕೆ ಗೀತರಚನೆಗಾರ ಪ್ರಸೂನ್ ಜೋಶಿ ಅವರು ಆಯ್ಕೆಯಾಗಲಿದ್ದಾರೆ.
2015ರಲ್ಲಿ ಕೇಂದ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಪಹ್ಲಾಜ್ ನಿಹಲಾನಿ ಅವರು ಉಡ್ತಾ ಪಂಜಾಬ್, ಲಿಫ್ಟಿಕ್ ಅಂಡರ್ ಮೈ ಬುರ್ಖಾ ಸೇರಿದಂತೆ ಹಲವು ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ಹಲವು ವಿವಾದಗಳಿಗೆ ಗುರಿಯಾಗಿದ್ದು ಅವರನ್ನು ಪದಚ್ಯುತಿಗೆ ಸರ್ಕಾರ ಮುಂದಾಗಿತ್ತು.
ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಇಂದು ಸರ್ಕಾರ್ ಮತ್ತು ಲಿಫ್ಟಿಕ್ ಅಂಡರ್ ಮೈ ಬುರ್ಖಾ ಚಿತ್ರಗಳಲ್ಲಿನ ಕೆಲ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಒತ್ತಡ ಹೇರಿದ್ದು ನೈತಿಕ ಪೊಲೀಸ್ಗಿರಿ ಪ್ರದರ್ಶಿಸಿದ್ದರು ಎಂಬ ಆರೋಪಗಳು ಕೇಳಿಬಂದಿತ್ತು.
ಇದೇ ವೇಳೆ ಲಿಫ್ಟಿಕ್ ಅಂಡರ್ ಮೈ ಬುರ್ಖಾ ಚಿತ್ರಕ್ಕೆ ಸರ್ಟಿಫಿಕೇಟ್ ನೀಡಲು ಪಹ್ಲಾಜ್ ನಿಹಲಾನಿ ನಿರಾಕರಿಸಿದ್ದರು. ಚಿತ್ರದಲ್ಲಿ ಅಶ್ಲೀಲ ದೃಶ್ಯಗಳು, ಸಂಭಾಷಣೆಗಳಿಗೆ ಕತ್ತರಿ ಪ್ರಯೋಗ ಮಾಡಿ ಎಂದು ಒತ್ತಾಯಿಸಿದ್ದರು ಎಂದು ಅಲಂಕ್ರಿತ ಶ್ರೀವಾತ್ಸವ್ ಆರೋಪಿಸಿದ್ದರು.