ಈ ಸಂಬಂಧ ಮಾಧ್ಯಮಗಳು ಆಮೀರ್ ಖಾನ್ ಅವರನ್ನು ಪ್ರಶ್ನಿಸಿದಾಗ ಪ್ರತಿಯೊಬ್ಬ ಕ್ರಿಯೇಟಿವ್ ವ್ಯಕ್ತಿಯ ಜೀವನದಲ್ಲಿ ಏರುಪೇರುಗಳಿರುತ್ತವೆ, ನಾವು ಯಾವಾಗಲೂ ಉತ್ತಮವಾದದ್ದನ್ನೇ ನೀಡಲು ಬಯಸುತ್ತೇವೆ. ಪ್ರತಿಯೊಬ್ಬರು ಸಿನಿಮಾ ಇಷ್ಟಪಡಲಿ ಎಂದು ಸಿನಿಮಾ ತಯಾರಿಸುತ್ತೇವೆ, ಕೆಲ ಸಮಯದಲ್ಲಿ ನಾವು ಯಶಸ್ವಿಯಾಗುತ್ತೇವೆ, ಕೆಲ ಸಮಯದಲ್ಲಿ ಫೇಲಾಗುತ್ತೇವೆ ಎಂದು ಹೇಳಿದ್ದಾರೆ. ಅದಕ್ಕಾಗಿ ನಾವು ಆಶ್ಚರ್ಯ ಪಡಬೇಕಿಲ್ಲ, ನಾವು ಯಾವುದರ ಮೇಲೆ ನಂಬಿಕೆಯಿಟ್ಟಿರುತ್ತೇವೋ ಅದನ್ನು ಮುಂದುವರಿಸಿಕೊಂಡಬೇಕು ಎಂದು ಸಲಹೆ ನೀಡಿದ್ದಾರೆ.