ಗಣೇಶ ಮೂರ್ತಿಗೆ ಕೈಮುಗಿದ ನೀವು ಹಿಂದೂನಾ-ಮುಸ್ಲಿಮಾ? ಹಿಂಬಾಲಕನ ಪ್ರಶ್ನೆಗೆ ಸಾಯಿಲ್ ಖಾನ್ ತಿರುಗೇಟು

ಬಾಲಿವುಡ್ ನಟ ಸಾಯಿಲ್ ಖಾನ್ ಅವರು ಗಣೇಶ್ ಹಬ್ಬವನ್ನು ಆಚರಿಸಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು ಇದಕ್ಕೆ ಹಿಂಬಾಲಕನೊಬ್ಬ ನೀವು ಹಿಂದೂನಾ...
ಸಾಯಿಲ್ ಖಾನ್
ಸಾಯಿಲ್ ಖಾನ್
Updated on
ಬಾಲಿವುಡ್ ನಟ ಸಾಯಿಲ್ ಖಾನ್ ಅವರು ಗಣೇಶ್ ಹಬ್ಬವನ್ನು ಆಚರಿಸಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು ಇದಕ್ಕೆ ಹಿಂಬಾಲಕನೊಬ್ಬ ನೀವು ಹಿಂದೂನಾ ಅಥವಾ ಮುಸ್ಲಿಮಾ ಎಂದು ಪ್ರಶ್ನಿಸಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸಾಯಿಲ್ ಖಾನ್ ಹಿಂಬಾಲಕನಿಗೆ ತಿರುಗೇಟು ನೀಡಿದ್ದಾರೆ. 
ನಿನ್ನೆ ದೇಶಾದ್ಯಂತ ಗಣೇಶ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಈ ಮಧ್ಯೆ ಬಾಲಿವುಡ್ ನಟ ಸಾಯಿಲ್ ಖಾನ್ ತಾವು ಹಣೆಗೆ ತಿಲಕ ವಿಟ್ಟು ಗಣೇಶ ಮೂರ್ತಿಯ ಮುಂದೆ ಕೈ ಮುಗಿದು ನಿಂತಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದ್ದರು. ಇದಕ್ಕೆ ಹಲವರು ಖ್ಯಾತೆ ತೆಗೆದಿದ್ದಾರೆ. 
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಾಯಿಲ್ ಖಾನ್, ನಾನು ಮೊದಲು ಭಾರತೀಯ. ನಂತರ ಮುಸ್ಲಿಂನಾಗಿ ಹುಟ್ಟಿದೆ. ಮೊದಲು ನಿನಗೆ ಆಹಾರ, ಹೆಸರು, ಪ್ರೀತಿ ಮತ್ತು ಗೌರವ ನೀಡಿದ ದೇಶವನ್ನು ಗೌರವಿಸಲು ಕಲಿ ಅಥವಾ ಬೇರೆ ಮುಸ್ಲಿಂ ರಾಷ್ಟ್ರಕ್ಕೆ ತೆರಳಿ ಅಲ್ಲಿ ನಿನ್ನ ಅದೃಷ್ಟ ಪರೀಕ್ಷೆ ಮಾಡು. ನಿನ್ನ ಋಣಾತ್ಮಾಕ ದ್ವೇಷದ ಆಟ ನನ್ನ ಜತೆ ಆಡಬೇಡ. ನನ್ನ ಸಾಮಾಜಿಕ ಜಾಲತಾಣದ ಖಾತೆಗೆ ನೀನು ಫೋಲೋ ಮಾಡುವುದು ಬೇಡ ನಿನ್ನಂಥವರು ನನಗೆ ಅನವಶ್ಯಕ. ಮೊದಲು ತಾಯಿ ನೆಲ ಗೌರವಿಸುವುದನ್ನು ಕಲಿ ನಂತರ ಧರ್ಮ-ನಿನ್ನ ಧಾರ್ಮಿಕ ಗ್ರಂಥವನ್ನು ಓದು-ಅದು ಕೂಡ ಇದನ್ನೇ ಹೇಳುತ್ತದೆ ಎಂದು ಖಾರವಾಗಿ ಬರೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com