ಪದ್ಮಾವತಿ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳನ್ನು ಧ್ವಂಸ ಮಾಡುತ್ತೇವೆ: ಕರ್ಣಿ ಸೇನೆ ಬೆದರಿಕೆ

ವಿವಾದಿತ ಪದ್ಮಾವತಿ ಚಿತ್ರಕ್ಕೆ ಕೊನೆಗೂ ಕೆಲ ಷರತ್ತುಗಳ ಮೇಲೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದು ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದೆ...
ಸುಖ್ದೇವ್ ಸಿಂಗ್
ಸುಖ್ದೇವ್ ಸಿಂಗ್
ನವದೆಹಲಿ: ವಿವಾದಿತ ಪದ್ಮಾವತಿ ಚಿತ್ರಕ್ಕೆ ಕೊನೆಗೂ ಕೆಲ ಷರತ್ತುಗಳ ಮೇಲೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದ್ದು ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಆದರೆ ಚಿತ್ರವನ್ನು ಪ್ರದರ್ಶಿಸುವ ಚಿತ್ರಮಂದಿರಗಳನ್ನು ಧ್ವಂಸ ಮಾಡುತ್ತೇವೆ ಎಂದು ಕರ್ಣಿ ಸೇನೆ ಮತ್ತೆ ಬೆದರಿಕೆ ಹಾಕಿದೆ. 
ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಾಜಸ್ತಾನದ ಕೆಲ ಸಂಘಟನೆಗಳು ಆರೋಪಿಸಿದ ಕಾರಣ ವಿವಾದ ಸೃಷ್ಟಿಯಾಗಿತ್ತು. ಈ ವೇಳೆ ಪದ್ಮಾವತಿ ಚಿತ್ರವನ್ನು ಬಿಡುಗಡೆ ಮಾಡುವ ಚಿತ್ರಮಂದಿರಗಳನ್ನು ಧ್ವಂಸ ಮಾಡುವುದಾಗಿ ಈ ಹಿಂದೆ ರಜಪೂತ ಕರ್ಣಿ ಸೇನೆ ಹೇಳಿತ್ತು. 
ಇದೀಗ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದ್ದು ಚಿತ್ರದ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದ್ದು ಈ ಮಧ್ಯೆ ಮತ್ತೆ ಕರ್ಣಿ ಸೇನೆಯ ಸದಸ್ಯ ಸುಖ್ದೇವ್ ಸಿಂಗ್ ಗೋಗಮೇದಿ ಅವರು ಭೂಗತ ಜಗತ್ತಿನ ಒತ್ತಡದಿಂದಾಗಿ ಚಿತ್ರಕ್ಕೆ ಸರ್ಟಿಫಿಕೇಟ್ ಸಿಕ್ಕಿದೆ. ಆದರೆ ಚಿತ್ರ ಪ್ರದರ್ಶನಗೊಂಡ ಪ್ರತಿ ಚಿತ್ರಮಂದಿರ ಬಳಿ ನಮ್ಮ ಕರ್ಣಿ ಸೇನೆಯ ಕಾರ್ಯಕರ್ತರು ಸೇರಿ ಅಂತಹ ಚಿತ್ರಮಂದಿರಗಳನ್ನು ಧ್ವಂಸ ಮಾಡುತ್ತಾರೆ ಎಂದು ಹೇಳಿದರು. 
ಪದ್ಮಾವತಿ ಭಾರೀ ಬಜೆಟ್ ನ ಚಿತ್ರವಾಗಿದ್ದು ಇದಕ್ಕಾಗಿ ನಿರ್ಮಾಪಕರು 190 ಕೋಟಿ ವ್ಯಯಿಸಿದ್ದಾರೆ. ಇನ್ನು ಚಿತ್ರದಲ್ಲಿ ಬಾಲಿವುಡ್ ನಟಿ ದಿಪೀಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅಭಿನಯಿಸಿದ್ದಾರೆ. ಪದ್ಮಾವತಿ ಚಿತ್ರದಲ್ಲಿ ರಜಪೂತ್ ಮನೆತನಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜಸ್ತಾನದಲ್ಲಿ ಪ್ರತಿಭಟನೆಗಳು ನಡೆಸಿದ್ದವು. ಚಿತ್ರದ ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಕರ್ಣಿ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com