ಕಾಂಚಿಪುರಂ: ಹಳ್ಳಿಗರಿಗೆ ಶೌಚಾಲಯ ನಿರ್ಮಿಸಿಕೊಟ್ಟ ನಟಿ ತ್ರಿಶಾ

ದಖ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕಾಂಚಿಪುರಂ ಜಿಲ್ಲೆಯ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದು ಅಲ್ಲಿನ ನಿವಾಸಿಗಳಿಗೆ ಶೌಚಾಲಯ ಕಟ್ಟಿಸಿ ಕೊಟ್ಟಿದ್ದಾರೆ.
ತ್ರಿಶಾ
ತ್ರಿಶಾ
ಚೆನ್ನೈ: ದಖ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕಾಂಚಿಪುರಂ ಜಿಲ್ಲೆಯ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದು ಅಲ್ಲಿನ ನಿವಾಸಿಗಳಿಗೆ ಶೌಚಾಲಯ ಕಟ್ಟಿಸಿ ಕೊಟ್ಟಿದ್ದಾರೆ.
ಯುನಿಸೆಫ್(ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್) ನ ಸೆಲೆಬ್ರಿಟಿ ಅಡ್ವೊಕೇಟ್ ಆಗಿರುವ ತ್ರಿಶಾ ಕಾಂಚಿಪುರಂ ಜಿಲ್ಲೆಯ ನೆಮಾಲಿ ಗ್ರಾಮಕ್ಕೆ ನಿನ್ನೆ ಭೇಟಿ ನೀಡಿದ್ದಾರೆ. ಈ ವೇಳೆ ನಟಿ ತಾವೇ ಮುಂದೆ ನಿಂತು ಗ್ರಾಮಸ್ಥರಿಗೆ ಶೌಚಾಲಯಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ. ಇವರ ಈ ಕಾರ್ಯ ಅಲ್ಲಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಶೌಚಾಲಯವಾದರೆ ಪರಿಸರ ಸ್ನೇಹಿಯಾಗಿದೆ. ಕಡಿಮೆ ನೀರಿನಲ್ಲಿ ಇವನ್ನು ಸ್ವಚ್ಚಗೊಳಿಸಬಹುದಾಗಿದೆ. "ಶೌಚಾಲಯ ಮಕ್ಕಳಲ್ಲಿ ಕಾಣಿಸುವ ರೋಗವನ್ನು ತಡೆಗಟ್ಟಬಲ್ಲದು. ಜೀವ ಉಳಿಸುವ ಶಕ್ತಿ ಶೌಚಾಲಯಕ್ಕಿದೆ. ಶೌಚಾಲಯ ಬಳಕೆ ಮಹಿಳೆಯರ ಘನತೆ, ಸುರಕ್ಷತೆಯನ್ನು ಹೆಚ್ಚಿಸುತ್ತದೆ" ತ್ರಿಶಾ ತಮ್ಮ ಹೇಳಿಕೆಯಯಲ್ಲಿ ತಿಳಿಸಿದ್ದಾರೆ.
ನಟಿ ತ್ರಿಶಾಕೇವಲ ಶೌಚಾಲಯ ನಿರ್ಮಾಣಕ್ಕೆ ಸಹಾಯವಷ್ಟೇ ಅಲ್ಲದೆ ರಕ್ತಹೀನತೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ  ಇದೇ ಮೊದಲಾದ ಸಮಸ್ಯೆ ಕುರಿತು ತಮಿಳು ಣಾಡು ಹಾಗೂ ಕೇರಳದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಸೇರಿ ಇತರೆ ಚಿತ್ರರಂಗದ ಸ್ಟಾರ್ ನಟ-ನಟಿಯರಿಗೆ ಮಾದರಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com