ಡಿಜಿಟಲ್ ಮಾಧ್ಯಮದಿಂದ ಸುಪ್ತ ಪ್ರತಿಭೆಗಳ ಅನಾವರಣ: ನವಾಜುದ್ದಿನ್ ಸಿದ್ದಿಖಿ

ಬಾಲಿವುಡ್ ನಲ್ಲಿ ಒಬ್ಬ ನಟನಾಗಿ ನನ್ನದೇ ಇಮೇಜ್ ಸೃಷ್ಟಿಸಿಕೊಳ್ಳುತ್ತೇನೆ ಎಂದು ನಾನು ಯಾವತ್ತೂ ಯೋಚಿಸಿರಲಿಲ್ಲ ಎಂದು ನಟ ನವಾಜುದ್ದೀನ್ ಸಿದ್ಧಿಖಿ ...
ನವಾಜುದ್ದೀನ್ ಸಿದ್ಧಿಖಿ
ನವಾಜುದ್ದೀನ್ ಸಿದ್ಧಿಖಿ

ನವದೆಹಲಿ:  ಬಾಲಿವುಡ್ ನಲ್ಲಿ  ಒಬ್ಬ ನಟನಾಗಿ ನನ್ನದೇ ಇಮೇಜ್ ಸೃಷ್ಟಿಸಿಕೊಳ್ಳುತ್ತೇನೆ ಎಂದು ನಾನು ಯಾವತ್ತೂ ಯೋಚಿಸಿರಲಿಲ್ಲ ಎಂದು ನಟ ನವಾಜುದ್ದೀನ್ ಸಿದ್ಧಿಖಿ ಅಭಿಪ್ರಾಯ ಪಟ್ಟಿದ್ದಾರೆ.

ವೈಟರ್, ಪಿಕ್ ಪಾಕೆಟರ್, ಕಳ್ಳ, ರೌಡಿ ಮತ್ತು ವರದಿಗಾರನ ನಂತರ ಶಾಲೆಯ ಶಿಕ್ಷಕ ಪಾತ್ರಗಳಲ್ಲಿ ಅಭಿನಯಿಸಿರುವ ನಟ ನವಾಜುದ್ದೀನ್ ಸಿದ್ಧಖಿ ಬಾಲಿವುಡ್ ನಲ್ಲಿ ನಾನು ಈ ಮಟ್ಟಕ್ಕೆ ಬೆಳೆಯುತ್ತೇನೆ ಎಂದು ಎಣಿಸಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನನಗಾಗಿ ಕೇವಲ ಒಂದೇ ಒಂದು ವ್ಯಕ್ತಿತ್ವ ಬೆಳೆಸಿಕೊಳ್ಳುವುದು ನನಗೆ ಇಷ್ಟವಿಲ್ಲ, ಈತ ಕೇವಲ ಒಂದೇ ರೀತಿಯ ಪಾತ್ರಗಳನ್ನು ಮಾಡುತ್ತಾನೆ ಎಂದು ಜನ ಮಾತನಾಡಿಕೊಳ್ಳುವುದು ನನಗೆ ಇಷ್ಟವಿಲ್ಲ, ಕಥೆಯ ನಾಯಕನಾಗುವುದು ನನಗೆ ಆಸಕ್ತಿಯಿಲ್ಲ, ಒಬ್ಬ ನಟನಾಗಿ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಲು ಸಾಧ್ಯವಾಗದಿರಕುವುದು ಆತನ ದೌರ್ಬಲ್ಯವಾಗುತ್ತದೆ, ಆದರೆ ನಾನು ಎಲ್ಲಾ ರೀತಿಯ ಪಾತ್ರಗಳನ್ನು  ಮಾಡಲು ನಾನು ನನಗೆ ಸವಾಲು ಒಡ್ಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನನ್ನ ನಟನಾ ಕೌಶಲ್ಯದ ಎಲ್ಲಾ ಯಶಸ್ಸು ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ಗೆ ಸಲ್ಲಬೇಕು. ತರಬೇತಿಯಿಂದ ನಾವು ಭಾರಿ ಪ್ರಮಾಣದಲ್ಲಿ ಕಲಿಯುತ್ತೇವೆ ಎಂದು ಹೇಳಿದ್ದಾರೆ.

ಡಿಜಿಟಲ್ ಮಾಧ್ಯಮದ ಬಗ್ಗೆ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಿದ್ಧಕಿ ಅತೀವ ಸಂತೋಷ ವ್ಯಕ್ತ ಪಡಿಸಿದ್ದಾರೆ. ಹೆಚ್ಚಿನ ಜನ ತಮ್ಮ ಬಹುಕಾಲ ಸಮಯವನ್ನು ಸಾಮಾಜಿಕ ಮಾಧ್ಯಮದ ಇತರ ವೇದಿಕೆಗಳಲ್ಲಿ ಬೇರೆಯವರ ಪೋಸ್ಟ್ ಗಳಿಗೆ ಕಮೆಂಟ್ ಮಾಡುತ್ತಾ ಕಾಲ ಕಳೆಯುತ್ತಾರೆ. ಇದನ್ನು ಡಿಜಿಟೈಸೇಶನ್ ನ ತಪ್ಪು ಉಪಯೋಗ ಎಂದು ನನಗೆ ಅನಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಡಿಜಿಯಲ್ ಮಾಧ್ಯಮದ ಒಂದು ನಕಾರಾತ್ಮಕ ಪ್ರಭಾವ ಎಂದರೇ ಸಾಮಾಜಿಕ ಮಾಧ್ಯಮಗಳಲ್ಲಿ ತಮಗೆ ಅನ್ನಿಸಿದ್ದನ್ನು ಯಾವುದೇ ನಿಬಂಧನೆಯಿಲ್ಲದೇ ಹೇಳುವ ಸ್ವಾತಂತ್ರ್ಯ ಇರುವುದು.  ಜನರಿಗೆ ಮಾತನಾಡುವ ಸ್ವಾತಂತ್ರ್ಯವಿದೆ, ಯಾವುದಾದರೂ ಒಂದು ಸಂಗತಿ ಬಗ್ಗೆ ತಮ್ಮ ಅಭಿಪ್ರಾಯ ಹೇಳುವ ಮುನ್ನ ಸ್ವಲ್ಪ ತಿಳುವಳಿಕೆ ಇಟ್ಟುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಿನಿಮಾಗಳ ಬಗ್ಗೆ ವಿಮರ್ಶೆ ಮಾಡಲಾಗುತ್ತಿದೆ, ಆದರೆ ಈ ವಿಮರ್ಶೆಗೆ ಅವರು ಯೋಗ್ಯರಾ ಎಂದು ಅವರು ಪ್ರಶ್ನಿಸಿದ್ದಾರೆ.

ಸಿನಿಮಾ ಉದ್ಯಮದ ಹಲವು ಮಂದಿಯಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತೆಗೆಯು ಡಿಜಿಟಲ್ ಮಾಧ್ಯಮ ತುಂಬಾ ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ.

ಜನವರಿ 13 ರಂದು ನಿರ್ದೇಶಕ ಶ್ಲೋಕ ಶರ್ಮಾ ಅವರ ಹರಾಮ್ ಕೋರ್ ಸಿನಿಮಾ ತೆರೆ ಕಾಣಲಿದೆ, ಇದಾದ ನಂತರ ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಜೊತೆ ಅಭಿನಯಿಸಿರುವ ರಾಯೀಸ್ ಸಿನಿಮಾ ತೆರೆ ಕಾಣಲಿದೆ.

ರಾಯೀಸ್ ಒಂದು ಮನರಂಜನಾತ್ಮಕ ಸಿನಿಮಾವಾಗಿದ್ದು ಶೂಟಿಂಗ್ ವೇಳೆ ತಾವು ತುಂಬಾ ಎಂಜಾಯ್ ಮಾಡಿದ್ದಾಗಿ ನವಾಜುದ್ದೀನ್ ಸಿದ್ಧಿಖಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com