ಸಿರಿಯಸ್ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸುವ ಬಾಲಿವುಡ್ ನಟಿ ಟಬು ಇದೀಗ ಕಾಮಿಡಿ ಚಿತ್ರದ ಮೂಲಕ ಕಮಾಲ್ ಮಾಡಲು ಹೊರಟಿದ್ದಾರೆ.
ರೋಹಿತ್ ಶೆಟ್ಟಿ ನಿರ್ದೇಶನದ ಗೋಲ್‍ಮಾಲ್ ಸರಣಿಯ ನಾಲ್ಕನೇ ಚಿತ್ರದಲ್ಲಿ ಟಬು ಕಾಣಿಸಿಕೊಳ್ಳಲಿದ್ದಾರೆ. ಅಜಯ್ ದೇವಗನ್ ನಾಯಕತ್ವದ ದೃಶ್ಯಂ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದ ಟಬು ಇದೀಗ ಅಜಯ್ ಜತೆ ಕಾಮಿಡಿ ಚಿತ್ರದಲ್ಲಿ ನಟಿಸಲಿದ್ದಾರೆ.
ರೋಹಿತ್ ಶೆಟ್ಟಿ ಅದಾಗಲೇ ಚಿತ್ರದ ನಟ-ನಟಿಯರ ಆಯ್ಕೆ ಮುಗಿಸಿದ್ದು ಚಿತ್ರದಲ್ಲಿ ಅರ್ಷದ್ ವಾರ್ಸಿ, ಪರಿಣೀತಿ ಚೋಪ್ರಾ, ತುಷಾರ್ ಕಪೂರ್, ಕುನಾಲ್ ಕಪೂರ್ ಮತ್ತು ಶ್ರೇಯಸ್ ತಲ್ಪಾಡೆ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಟಬು ಯಾವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.