ಮನಿಷಾ ಕೊಯಿರಾಲ
ಮನಿಷಾ ಕೊಯಿರಾಲ

ಗುರುಗಳ ಆರ್ಶಿರ್ವಾದ ಜೀವನಕ್ಕೆ ಅತೀ ಮುಖ್ಯ: ಮನಿಷಾ ಕೊಯಿರಾಲ

ಗುರು ಪೂರ್ಣಿಮೆ ಹಿನ್ನೆಲೆ ಮಾತನಾಡಿರುವ ಬಾಲಿವುಡ್ ನಟಿ ಮನಿಷಾ ಕೊಯಿರಾಲ ಅವರು ಪ್ರತಿಯೊಬ್ಬರ ಜೀವನದಲ್ಲೂ ಗುರುಗಳು...
Published on
ಹರಿದ್ವಾರ್(ಉತ್ತರಖಂಡ್): ಗುರು ಪೂರ್ಣಿಮೆ ಹಿನ್ನೆಲೆ ಮಾತನಾಡಿರುವ ಬಾಲಿವುಡ್ ನಟಿ ಮನಿಷಾ ಕೊಯಿರಾಲ ಅವರು ಪ್ರತಿಯೊಬ್ಬರ ಜೀವನದಲ್ಲೂ ಗುರುಗಳು ಅವಶ್ಯವಾಗಿರಬೇಕು. ಆಗಿದ್ದರೆ ಮಾತ್ರ ಜೀವನದಲ್ಲಿ ಶಾಂತಿ, ನೆಮ್ಮದಿ ಸಂಪಾದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. 
ಗುರು ಪೂರ್ಣಿಮೆ ಹಿನ್ನೆಲೆ ನಾನು ನನ್ನ ಗುರುಗಳ ಆಶೀರ್ವಾದ ಪಡೆದಿದ್ದೇನೆ. ಅನೇಕ ವರ್ಷಗಳಿಂದ ಆಧ್ಯಾತ್ಮದ ಭಾವ ಮೂಡಿದ್ದು ಅದನ್ನು ಇನ್ನಷ್ಟು ಪ್ರಕರವಾಗಿಸಿಕೊಳ್ಳಬೇಕು ಎಂದು 46 ವರ್ಷದ ನಟಿ ಮನಿಷಾ ಕೊಯಿರಾಲ ಹೇಳಿದ್ದಾರೆ. 
ಎರಡು ಅಂಶಗಳು ನನ್ನ ಮನಸ್ಸಿನ ಶಾಂತಿ ಕಾಪಾಡಲು ಸಹಕಾರಿಯಾಗಿದೆ. ಒಂದು ಚೆನ್ನೈನ ವಿಶ್ವ ವಿದ್ಯಾಲಯ ಮತ್ತೊಂದು ಹರಿದ್ವಾರದ ಪಿಲೋಟ್ ಬಾಬಾರಿಂದ ಆರ್ಶಿವಾರ್ದ ಪಡೆಯುವುದು ಎಂದು ಹೇಳಿದ್ದಾರೆ. 
ಗುರು ಪೂರ್ಣಿಮೆ ಹಿನ್ನಲೆ ಮಾತನಾಡಿರುವ ಅವರು ಗುರುಗಳ ಆಶೀರ್ವಾದ ಅತೀ ಮುಖ್ಯ. ನಾನು ಇಲ್ಲಿಗೆ ಬಂದಿದ್ದು ಸಂತೋಷ ಉಂಟು ಮಾಡಿದೆ. ಜತೆಗೆ ಅಶಾಂತಿಯನ್ನು ನಿವಾರಿಸಲು ಪ್ರಯೋಜನವಾಗಿದೆ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com