ವೆಂಬ್ಲೆ ಸಂಗೀತೋತ್ಸವ: ಎ.ಆರ್.ರೆಹಮಾನ್ ವಿರುದ್ಧ ಹಿಂದಿ ಪ್ರಿಯರ ಅಕ್ರೋಶ

ಬಾಲಿವುಡ್ ಸಂಗೀತ ರಂಗದಲ್ಲಿ ಅತ್ಯಂತ ಹೆಸರುಗಳಿಸಿರುವ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ವಿರುದ್ಧ ಇದೀಗ ಹಿಂದಿ ಪ್ರಿಯಕರು ಸಾಕಷ್ಟು ಆಕ್ರೋಶಗಳನ್ನು ವ್ಯಕ್ತಪಡಿಸತೊಡಗಿದ್ದಾರೆ...
ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್
ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್
ನವದಹೆಲಿ: ಬಾಲಿವುಡ್ ಸಂಗೀತ ರಂಗದಲ್ಲಿ ಅತ್ಯಂತ ಹೆಸರುಗಳಿಸಿರುವ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ವಿರುದ್ಧ ಇದೀಗ ಹಿಂದಿ ಪ್ರಿಯಕರು ಸಾಕಷ್ಟು ಆಕ್ರೋಶಗಳನ್ನು ವ್ಯಕ್ತಪಡಿಸತೊಡಗಿದ್ದಾರೆ. 
ವೆಂಬ್ಲೆಯಲ್ಲಿ ಆಯೋಜಿಸಿದ್ದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಎ.ಆರ್.ರೆಹಮಾನ್ ಅವರು ತಮಿಳು ಹಾಡುಗಳನ್ನೇ ಹೆಚ್ಚಾಗಿ ಹಾಡಿದ್ದಕ್ಕೆ ಹಿಂದಿ ಪಿಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹಿಂದಿ ಹಾಡುಗಳನ್ನು ಹಾಡದ್ದಕ್ಕೆ ಅಭಿಮಾನಿಗಳು ಟ್ವಿಟರ್ ನಲ್ಲಿ ರೆಹಮಾನ್ ವಿರುದ್ಧ ಟ್ವೀಟ್ ಮಾಡಿ ಅಸಮಾಧಾನವನ್ನು ಹೊರಹಾಕಿದ್ದಾರೆ. 
ಕಳೆದ ಜೂನ್. 3 ರಂದು ಲಂಡನ್ ನಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಉಗ್ರರು ದಾಳಿ ನಡೆಸಿದ್ದರು. ಇದಾದ ಬಳಿಕ ಜೂನ್.8 ರಂದು 'ನೆಟ್ರು ಇಂಡ್ರು ನಳೈ' ಕಾರ್ಯಕ್ರಮವನ್ನು ಲಂಡನ್ ನಲ್ಲಿ ಆಯೋಜಿಸಲಾಗಿತ್ತು. ವಿದೇಶದಲ್ಲಿ ನಡೆದ ಈ ಸಂಗೀತ ಕಾರ್ಯಕ್ರಮದಲ್ಲಿ ರೆಹಮಾನ್ ಅವರು ಒಟ್ಟು 16 ಹಾಡುಗಳನ್ನು ಹಾಡಿದ್ದಾರೆ. 16 ಹಾಡುಗಳ ಪೈಕಿ 12 ಹಾಡುಗಳನ್ನು ತಮಿಳು ಹಾಡುಗಳನ್ನೇ ಹಾಡಿದ್ದಾರೆ. 
ಎ.ಆರ್. ರೆಹಮಾನ್ ಅವರ ಹಿಂದಿ ಹಾಡುಗಳಿಗೆ ಹೆಚ್ಚು ಅಭಿಮಾನಿಗಳಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ರೆಹಮಾನ್ ಅವರು ಹಿಂದಿ ಹಾಡುಗಳನ್ನು ಹಾಡದೆ ತಮಿಳು ಹಾಡುಗಳನ್ನು ಹೆಚ್ಚಾಗಿ ಹಾಡಿರುವುದು ಇದೀಗ ಹಿಂದಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಎ.ಆರ್. ರೆಹಮಾನ್ ಅವರು ಖ್ಯಾತಿ ಗಳಿಸಿದ್ದು ಹಿಂದಿಯಿಂದ ಎಂಬುದನ್ನು ಅವರು ಮರೆತಿರುವ ಹಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನೀವು ಖ್ಯಾತಿ ಗಳಿಸಿರುವುದಕ್ಕೆ ಹಿಂದಿ ಮ್ಯೂಸಿಕ್ ಕಾರಣವೇ ಹೊರತು ತಮಿಳು ಅಲ್ಲ. ನಮಗೆ ನಿರಾಸೆಯಾಗಿದೆ. ಈ ಮಟ್ಟದ ನಿರಾಸೆ ಎಂದೂ ಆಗಿರಲಿಲ್ಲ ಎಂದು ಬಾಲಿವುಡ್ ಪ್ರಿಯರು ರೆಹಮಾನ್ ವಿರುದ್ಧ ಕಿಡಿಕಾರುತ್ತಿದ್ದಾರೆ. 
ಮತ್ತೆಯೊಂದೆಡೆ ರೆಹಮಾನ್ ಅವರಿಗೆ ಬೆಂಬಲ ಕೂಡ ವ್ಯಕ್ತವಾಗುತ್ತಿದ್ದು, ಕಾರ್ಯಕ್ರಮ ಇತರ ಭಾಷೆಗಳ ಕಡೆಗಿನ ಅಸಹಿಷ್ಣುತೆಯನ್ನು ತೋರಿಸುತ್ತದೆ. ಆದರೆ, ಮೊದಲಿಗೆ ಹಿಂದೆ ಭಾರತದ ಭಾಷೆಗಳಲ್ಲಿ ಒಂದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಲವರ ಆಲೋಚನೆಗಳು ಎಂದಿಗೂ ಬದಲಾಗುವುದಿಲ್ಲ. ಸಂಗೀತಕ್ಕೆ ಭಾಷೆಯ ಸೀಮಿತ ಇದೆಯೇ? ಎಂದು ಪ್ರತಿಕ್ರಿಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com