ಮುಂಬೈ: ಪ್ರತಿಯೊಬ್ಬರು, ವಿಶೇಷವಾಗಿ ಮಹಿಳೆಯರು ಸುರಕ್ಷಿತ ಮತ್ತು ಸ್ವಚ್ಛ ಶೌಚಾಲಯ ಹೊಂದಿರಬೇಕು ಎಂದು ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಅಕ್ಷಯ್ ಕುಮಾರ್ ತಮ್ಮ ಮುಂಬರುವ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದ ಮೂಲಕ ಬಯಲು ಶೌಚ ಮುಕ್ತಗೊಳಿಸಲು ಶೌಚಾಲಯ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಲ್ಲಿ ಶೌಚಾಲಯ ಹೊಂದುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.
ಮತ್ತೊಂದು ಹೆಜ್ಜೆ ಮುಂದಿಟ್ಟಿರುವ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚಿತ್ರದ ನಿರ್ಮಾಪಕರು, ಕ್ಲೀನ್ ಮೆಟ್ ನೊಂದಿಗೆ '2 ಫಾರ್ ಟಾಯ್ಲೆಟ್' ಹೆಸರಿನಡಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದು, ಈ ಮೂಲಕ ದೇಶಾದ್ಯಂತ ನೈರ್ಮಲ್ಯ ಸೌಲಭ್ಯಗಳನ್ನು ಸುಧಾರಿಸಲು ಯತ್ನಿಸುತ್ತಿದೆ.
'2 ಫಾರ್ ಟಾಯ್ಲೆಟ್' ಬಗ್ಗೆ ನನಗೆ ತುಂಬಾ ಖುಷಿ ಇದೆ. ಇದು ನನ್ನ ಮುಂಬರುವ ಚಿತ್ರದ ಸಂದೇಶವನ್ನೇ ನೀಡುತ್ತಿದೆ. ಪ್ರತಿಯೊಬ್ಬರು, ವಿಶೇಷವಾಗಿ ಮಹಿಳೆಯರು ಶೌಚಾಲಯದಂತಹ ಮೂಲ ಸೌಲಭ್ಯಗಳನ್ನು ಹೊಂದಬೇಕು ಎಂದು ಅಕ್ಷಯ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.