ಸಂದರ್ಶನದ ಮಧ್ಯೆ ಪತ್ರಕರ್ತೆಯ ಮೊಬೈಲ್ ಕರೆ ಸ್ವೀಕರಿಸಿದ ಅನುಷ್ಕಾ!
ಬಾಲಿವುಡ್
ಸಂದರ್ಶನದ ಮಧ್ಯೆ ಪತ್ರಕರ್ತೆಯ ಮೊಬೈಲ್ ಕರೆ ಸ್ವೀಕರಿಸಿದ ಅನುಷ್ಕಾ!
ಸಿನಿಮಾ ವೊಂದರ ಕುರಿತು ವರದಿಗಾರರ ಸಂದರ್ಶನದ ವೇಳೆ ಪತ್ರಕರ್ತೆಯೋರ್ವರ ಮೊಬೈಲ್ ಗೆ ಬಂದ ಕರೆ ಸ್ವೀಕರಿಸಿ ಮಾತನಾಡುವ ಮೂಲಕ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ನೆರೆದಿದ್ದವರಲ್ಲಿ ಅಚ್ಚರಿಗೆ ಮೂಡಿಸಿದ್ದಾರೆ...
ಹೈದರಾಬಾದ್: ಸಿನಿಮಾ ವೊಂದರ ಕುರಿತು ವರದಿಗಾರರ ಸಂದರ್ಶನದ ವೇಳೆ ಪತ್ರಕರ್ತೆಯೋರ್ವರ ಮೊಬೈಲ್ ಗೆ ಬಂದ ಕರೆ ಸ್ವೀಕರಿಸಿ ಮಾತನಾಡುವ ಮೂಲಕ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ನೆರೆದಿದ್ದವರಲ್ಲಿ ಅಚ್ಚರಿಗೆ ಮೂಡಿಸಿದ್ದಾರೆ.
ಅನುಷ್ಕಾ ಶರ್ಮಾ ಅವರ ಮುಂಬರುವ ಚಿತ್ರ ಫಿಲೌರಿ ಕುರಿತು ವರದಿಗಾರರ ಸಂದರ್ಶನದಲ್ಲಿ ಮಾತನಾಡುತ್ತಿದ್ದ ವೇಳೆ ಪತ್ರಕರ್ತೆಯೊಬ್ಬರ ಮೊಬೈಲ್'ಗೆ ಕರೆ ಬಂದಿದೆ. ಈ ವೇಳೆ ಪತ್ರಕರ್ತೆಯ ಫೋನನ್ನು ತೆಗೆದುಕೊಂಡ ಅನುಷ್ಕಾ ಕರೆ ಸ್ವೀಕರಿಸಿ ಮಾತನಾಡಿದ್ದಾರೆ.
ಆಂಟಿ ನಿಮ್ಮ ಮಗಳು ನನ್ನ ಸಂದರ್ಶನ ಮಾಡುತ್ತಿದ್ದಾರೆ. ಮತ್ತೆ ನಿಮ್ಮ ಮಗಳು ನಿಮಗೆ ಕರೆ ಮಾಡುತ್ತಾರೆ... ನಾನು ಅನುಷ್ಕಾ...ಅನುಷ್ಕಾ ಶರ್ಮಾ ಮಾನತಾಡುತ್ತಿದ್ದೇನೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ಈ ವಿಡಿಯೋವನ್ನು ವೀಕ್ಷಣೆ ಮಾಡುತ್ತಿದ್ದಾರೆ. ವಿಡಿಯೋ ನೋಡಿದ ಕೆಲವರು ಹಾಸ್ಯವೆಂದು ನಗುತ್ತಿದ್ದರೆ, ಮತ್ತೆ ಕೆಲವರು ಅನುಷ್ಕಾ ಕುರಿತು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ