ಸಂಗೀತಕ್ಕೆ ಧರ್ಮದ ಲೇಪ ಬೇಡ, ಸುಹಾನಾರನ್ನು ವಿರೋಧಿಸುವುದು ಸರಿಯಲ್ಲ: ಬಾಲಿವುಡ್ ಸಿಂಗರ್ ಸಲೀಂ

ಜೀ ವಾಹಿನಿಯ ಸರಿಗಮಪದಲ್ಲಿ ಹಿಂದೂ ಭಕ್ತಿಗೀತೆಯನ್ನು ಹಾಡಿದ್ದ ಸುಹಾನಾ ಸಯ್ಯದ್ ರ ಹಾಡುಗಾರಿಕೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು...
ಸುಹಾನಾ
ಸುಹಾನಾ
ಮಂಗಳೂರು: ಜೀ ವಾಹಿನಿಯ ಸರಿಗಮಪದಲ್ಲಿ ಹಿಂದೂ ಭಕ್ತಿಗೀತೆಯನ್ನು ಹಾಡಿದ್ದ ಸುಹಾನಾ ಸಯ್ಯದ್ ರ ಹಾಡುಗಾರಿಕೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಬಾಲಿವುಡ್ ಸಂಗೀತಕಾರ ಸಲೀಂ ಸುಲೇಮಾನ್ ಹೇಳಿದ್ದಾರೆ. 
ಸಂಗೀತಕ್ಕೆ ಧರ್ಮದ ಲೇಪ ಬೇಡ, ಸಂಗೀತಕ್ಕೆ ಧರ್ಮದ ಚೌಕಟ್ಟಿಲ್ಲ. ಸುಹಾನಾ ದೇವರ ನಾಮ ಹಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಸಲೀಂ ಮಂಗಳೂರಿನಲ್ಲಿ ಹೇಳಿದ್ದಾರೆ. 
ಸಿಂಗರ್ ಆಗಿರುವ ನಾನು ಭಜನೆ, ಗಣೇಶ ಸುತ್ತಿ, ಭಕ್ತಿ ಗೀತೆಗಳನ್ನು ಹಾಡಿದ್ದೇನೆ. ದೇವರ ನಾಮ ಹಾಡಿದರೆಂದು ವಿರೋಧಿಸುವುದು ತರವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಸುಹಾನಾ ಬುರ್ಕಾ ಧರಿಸಿ ಹಿಂದೂ ಭಕ್ತಿ ಗೀತೆ ಹಾಡಿದ್ದಕ್ಕೆ ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com