ಏರ್ ಲಿಫ್ಟ್ ರಿಯಲ್ ಹೀರೋ ಮ್ಯಾಥ್ಯೂಸ್ ವಿಧಿವಶ

ಏರ್ ಲಿಫ್ಟ್ ರಿಯಲ್ ಹೀರೋ ಕುವೈತ್ ನಲ್ಲಿನ ಭಾರತೀಯ ಉದ್ಯಮಿ ಮಾಥುನ್ನಿ ಮ್ಯಾಥ್ಯೂಸ್ ಅವರು ನಿಧನ ಹೊಂದಿದ್ದಾರೆ...
ಮಾಥುನ್ನಿ ಮ್ಯಾಥ್ಯೂಸ್
ಮಾಥುನ್ನಿ ಮ್ಯಾಥ್ಯೂಸ್
ತಿರುವನಂತಪುರ: ಏರ್ ಲಿಫ್ಟ್ ರಿಯಲ್ ಹೀರೋ ಕುವೈತ್ ನಲ್ಲಿನ ಭಾರತೀಯ ಉದ್ಯಮಿ ಮಾಥುನ್ನಿ ಮ್ಯಾಥ್ಯೂಸ್ ಅವರು ನಿಧನ ಹೊಂದಿದ್ದಾರೆ. 
ಮಾಥುನ್ನಿ ಮ್ಯಾಥ್ಯೂಸ್ 1990ರ ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಲಕ್ಷಾಂತರ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 
ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಕುಂಬನಾಡು ಮೂಲದವರಾದ 81 ವರ್ಷದ ಮ್ಯಾಥ್ಯೂಸ್ ಅವರು ಕೆಲಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದರು. ಶನಿವಾರ ಕುವೈತ್ ನಲ್ಲಿ ನಿಧನ ಹೊಂದಿದ್ದರು ಎಂದು ವರದಿಗಳು ತಿಳಿಸಿವೆ. 
ಮ್ಯಾಥ್ಯೂಸ್ ಅವರು 20ನೇ ವಯಸ್ಸಿನಲ್ಲಿ ಉದ್ಯೋಗ ಅರಸಿ ಕುವೈತ್ ಗೆ ತೆರಳಿದ್ದರು. ಟೊಯೋಟಾ ಕಂಪನಿಯಲ್ಲಿ ಟೈಪಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದ ಅವರು 1989ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದರು. ನಂತರ 1990ರಲ್ಲಿ ಸ್ವಂತ ಕಂಪನಿ ಹಾಗೂ ಶಾಲೆಗಳನ್ನು ಆರಂಭಿಸಿದ್ದರು. 1990ರಲ್ಲಿ ಇರಾಕ್ ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಕುವೈತ್ ಆಕ್ರಮಿಸಿಕೊಂಡಾಗ 1.50 ಲಕ್ಷಕ್ಕೂ ಅಧಿಕ ಭಾರತೀಯರು ಸಂಕಷ್ಟಕ್ಕೆ ಸಿಲುಕ್ಕಿದ್ದರು. ಆಗ ಭಾರತೀಯರ ರಕ್ಷಣೆಗೆ ಮ್ಯಾಥ್ಯೂಸ್ ಧಾವಿಸಿದ್ದರು. 
ಇದೇ ಕತೆ ಆಧರಿಸಿ ಚಿತ್ರ 2016ರಲ್ಲಿ ಏರ್ ಲಿಫ್ಟ್ ಎಂಬ ಹೆಸರಿನಲ್ಲಿ ತೆರೆಕಂಡಿತ್ತು. ಮ್ಯಾಥ್ಯೂಸ್ ಪಾತ್ರವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ನಿರ್ವಹಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com