ಇತಿಹಾಸ ಸೃಷ್ಟಿಸಿದ ಆಮೀರ್ ಖಾನ್ 'ದಂಗಾಲ್'; ಚೈನಾದಲ್ಲಿಯೇ ೧೦೦೦ ಕೋಟಿ ಗಳಿಕೆ

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ನಟನೆಯ 'ದಂಗಾಲ್' ಚೈನಾದಲ್ಲಿ ೧೦೦೦ ಕೋಟಿ ಗಳಿಕೆ ಕಂಡು ಗುರುವಾರ ಇತಿಹಾಸ ಬರೆದಿದೆ. ಚೈನಾ ಟಿಕೆಟ್ ಅಂತರ್ಜಾಲ ತಾಣವೊಂದು ಹೇಳುವಂತೆ
'ದಂಗಾಲ್' ಸಿನೆಮಾ ಪೋಸ್ಟರ್
'ದಂಗಾಲ್' ಸಿನೆಮಾ ಪೋಸ್ಟರ್
ಬೀಜಿಂಗ್: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ನಟನೆಯ 'ದಂಗಾಲ್' ಚೈನಾದಲ್ಲಿ ೧೦೦೦ ಕೋಟಿ ಗಳಿಕೆ ಕಂಡು ಗುರುವಾರ ಇತಿಹಾಸ ಬರೆದಿದೆ. ಚೈನಾ ಟಿಕೆಟ್ ಅಂತರ್ಜಾಲ ತಾಣವೊಂದು ಹೇಳುವಂತೆ ಭಾರತೀಯ ಸಿನೆಮಾವೊಂದು ಈ ದಾಖಲೆ ಬರೆದಿರುವುದು ಇದೆ ಮೊದಲು. 
ಚೈನಾದಲ್ಲಿ ವಿದೇಶಿ ಸಿನೆಮಾಗಳನ್ನು ವಿರಳವಾಗಿ ಬಿಡುಗಡೆ ಮಾಡುವುದರಿಂದ ಇಂತಹ ಸಂಗತಿ ವಿಶೇಷ ಎನ್ನಲಾಗಿದೆ. ಇಲ್ಲಿಯವರೆಗೂ ೧೦೦೦ ಕೋಟಿಗೂ ಹೆಚ್ಚು ಗಳಿಕೆ ಕಂಡ ೩೦ ಸಿನೆಮಾಗಳ ಕ್ಲಬ್ ಅನ್ನು ದಂಗಾಲ್ ಸೇರಿದೆ. 
ಇಲ್ಲಿಯವರೆಗೂ ಚೈನಾದಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ವಿದೇಶಿ ಸಿನೆಮಾಗಳೆಂದರೆ 'ದ ಮರ್ಮೇಡ್', 'ಮಾನ್ಸ್ಟರ್ ಹಂಟ್', 'ದ ಫಾಸ್ಟ್ ಅಂಡ್ ಫ್ಯುರಿಯಸ್' ಮತ್ತು 'ಫ್ಯುರಿಯಸ್ ೭'.
ಚೈನಾದಲ್ಲಿ ಅಮೀರ್ ಖಾನ್ ಅತಿ ಜನಪ್ರಿಯ ಭಾರತೀಯ ನಟ. ಸಾಮಾನ್ಯವಾಗಿ ಪುರುಷ ಪ್ರಧಾನ ಸಮಾಜ ಎನ್ನಲಾಗುವ ಚೈನಾದಲ್ಲಿ ಈ ಸಿನೆಮಾ ಜನಮೆಚ್ಚಿಗೆ ಗಳಿಸಿರುವುದರ ಬಗ್ಗೆ ಮಾಧ್ಯಮಗಳು ಬಹಳಷ್ಟು ಬರೆದಿವೆ. "ಈ ಸಿನೆಮಾ ನನ್ನ ತಂದೆಯನ್ನು ನೆನಪಿಸಿತು. ಅವರಿಗೆ ಮಗ ಬೇಕಾಗಿತ್ತು. ನನ್ನನ್ನು ಪುತ್ರನಂತೆ ಬೆಳೆಯಲು ಒತ್ತಡ ಹೇರಿದರು" ಎಂದು ಚೈನಾ ಸರ್ಕಾರದ ಅಧಿಕಾರಿ ಸಂದರ್ಶನವೊಂದರಲ್ಲಿ ಹೇಳಿರುವದಾಗಿ ಮಾಧ್ಯಮವೊಂದು ತಿಳಿಸಿದೆ. 
ಮೇ ೫ ರಂದು ಚೈನಾದಲ್ಲಿ ೭೦೦೦ ತೆರೆಗಳಲ್ಲಿ 'ದಂಗಾಲ್' ಬಿಡುಗಡೆಯಾಗಿತ್ತು. 
ಇದು ಜನರ ಭಾವನೆಗಳಿಗೆ ಸ್ಪಂದಿಸಿರುವುದಕ್ಕೆ ಇಷ್ಟು ಯಶಸ್ವಿಯಾಗಿದೆ ಎಂದು ನಟ ಅಮೀರ್ ಖಾನ್ ಹೇಳಿದ್ದಾರೆ. "ನಾನು ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ಓದುತ್ತಿದ್ದೇನೆ. ಪಾತ್ರಗಳು ಹೇಗೆ ಅವರ ಭಾವನೆಗಳನ್ನು ತಟ್ಟಿದವು ಮತ್ತು ಹೇಗೆ ಸ್ಫೂರ್ತಿ ನೀಡಿದವು ಎಂದು ಬರೆಯುತ್ತಿದ್ದಾರೆ. ಯುವಕರಿಗೆ ಅವರ ತಂದೆ ತಾಯಿಯ ಕಷ್ಟಗಳ ಅರಿವಾಗಿದೆ. ಎಷ್ಟೋ ಜನ ತಮ್ಮ ಪೋಷಕರಿಗೆ ಕರೆ ಮಾಡಿ ಅತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com