2017ನೇ ಸಾಲಿನ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿ: ಪ್ರಿಯಾಂಕಾ ಚೋಪ್ರಾಗೆ ಸ್ಥಾನ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬಾಲಿವುಡ್ ನಟಿ ಪ್ರಿಯಾಂಕಾ ...
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಫೋರ್ಬ್ಸ್ 2017ನೇ ಸಾಲಿನ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. 
ಈ ವರ್ಷ ವಿಶ್ವದ 100 ಅತ್ಯಂತ ಪ್ರಭಾವಶಾಲಿ ಮಹಿಳೆಯರ ಪೈಕಿ ಪ್ರಿಯಾಂಕಾ ಚೋಪ್ರಾ 97ನೇ ಸ್ಥಾನ ಗಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರಿಯಾಂಕಾ ಚೋಪ್ರಾರ ಸಾಧನೆ ಮತ್ತು ಸೇವಾ ಕಾರ್ಯಗಳು ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.
ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಜರ್ಮನಿಯ ಚಾನ್ಸೆಲರ್ ಅಂಜೆಲಾ ಮರ್ಕರ್, ಎರಡನೇ ಸ್ಥಾನ ಇಂಗ್ಲೆಂಡ್ ಪ್ರಧಾನಿ ತೆರೆಸಾ ಮೆ ಮತ್ತು ಮೂರನೇ ಸ್ಥಾನ ಉದ್ಯಮ ಮಹಿಳೆ ಮೆಲಿಂಡಾ ಗೇಟ್ಸ್ ಅವರಿಗೆ ಸಂದಿದೆ. ಈ ಬಾರಿಯ ಪಟ್ಟಿಯಲ್ಲಿ ಭಾರತದ ಮಹಿಳೆಯರಾದ ಚಂದಾ ಕೊಚ್ಚರ್, ರೊಶ್ನಿ ನಾಡಾರ್ ಮಲ್ಹೋತ್ರಾ, ಕಿರಣ್ ಮಜುಂದಾರ್ ಷಾ ಮತ್ತು ಶೋಭಾ ಭಾರ್ತಿಯಾ ಪಾತ್ರರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com