ಬಾಲಿವುಡ್ ನ ಖ್ಯಾತ ನಿರ್ದೇಶಕ ವಿ.ಶಾಂತಾರಾಂ ಅವರಿಗೆ ಗೂಗಲ್ ಗೌರವ
ಬಾಲಿವುಡ್ ನ ಖ್ಯಾತ ನಿರ್ದೇಶಕ ವಿ.ಶಾಂತಾರಾಂ ಅವರಿಗೆ ಗೂಗಲ್ ಗೌರವ

ಬಾಲಿವುಡ್ ನ ದಿಗ್ಗಜ ವಿ.ಶಾಂತಾರಾಂ ಅವರಿಗೆ ಗೂಗಲ್ ಗೌರವ

ಇಂದು ಭಾರತೀಯ ಚಲನಚಿತ್ರ ರಂಗದ ಖ್ಯಾತ ನಿರ್ದೇಶಕ, ನಟ, ಕಥೆಗಾರರಾಗಿದ್ದ ವಿ.ಶಾಂತಾರಾಮ್ ಅವರ 116ನೇ ಜನ್ಮ ದಿನ.
Published on
ಮುಂಬೈ: ಇಂದು ಭಾರತೀಯ ಚಲನಚಿತ್ರ ರಂಗದ ಖ್ಯಾತ ನಿರ್ದೇಶಕ, ನಟ, ಕಥೆಗಾರರಾಗಿದ್ದ ವಿ.ಶಾಂತಾರಾಮ್ ಅವರ 116ನೇ ಜನ್ಮ ದಿನ. ಗೂಗಲ್ ಸಂಸ್ಥೆ ಇವರ ಜನ್ಮ ದಿನಕ್ಕೆ ವಿಶೇಷ ಡೂಡಲ್ ರಚಿಸುವ ಮೂಲಕ ಗೌರವ ಸಲ್ಲಿಸುತ್ತಿದೆ.
ಡೂಡಲ್ ನಲ್ಲಿ ಶಾಂತಾರಾಂ ಅವರ ಚಿತ್ತಾಕರ್ಷಕ ಪೋಸ್ಟರ್ ಇದ್ದು ಇದರೊಡನೆ ಹಳೆಯ ಕಾಲದ ಚಿರ್ತದ ಚಿತ್ರೀಕರಣಕ್ಕೆ ಬಳಸುತ್ತಿದ್ದ ಕ್ಯಾಮರಾ, ಒಂದು ಮರಾಠಿ ಚಿತ್ರದ ಸ್ಟಿಲ್, ಮತ್ತು ಅವನ ಎರಡು ಬ್ಲಾಕ್ ಬಸ್ಟರ್ ಚಿತ್ರಗಲಾದ "ಡೊ ಆಂಖೆ ಬರಾ ಹಾಥ್" ಮತ್ತು "ಝನಕ್ ಝನಕ್ ಪಾಯಲ್ ಭಾಜೆ" ಚಿತ್ರದ ಸ್ಟಿಲ್ ಗಳನ್ನು ಕಾಣಬಹುದು.
ಶಾಂತರಾಮ್‌ ರಾಜರಾಮ್ ವಂಕುಡ್ರೆ ನ.18, 1901ರಲ್ಲಿ ಮರಾಠಿ ಜೈನ ಕುಟುಂಬದಲ್ಲಿ ಜನಿಸಿದರು. ಅವರ ಇಪ್ಪತ್ತನೇ ವರ್ಷದಲ್ಲಿ ಮೂಕಿ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆಬಳಿಕ ಶಾಂತಾರಾಂ ಕೇವಲ ನಟರಾಗಿಯೇ  ಉಳಿಯದೆ ಚಿತ್ರಕಥೆ, ನಿರ್ದೇಶನಕ್ಕೂ ಮುಂದಾದರು.]
'ಸುರೇಖಾ ಹರನ್'(1921), 'ಸವ್ಕರಿ ಪಾಶ್'(1925), 'ದೊ ಆಂಖೆ ಬಾರಾ ಹಾಥ್' (1957), 'ಸ್ತ್ರೀ'(1961),  ಇದೇ ಮೊದಲಾದ ಚಿತ್ರಗಳಿಗೆ ದುಡಿದ ಇವರು ಸಾಮಾಜಿಕ ಕಳಕಳಿಯನ್ನು ತೋರಿಸುವಲ್ಲಿ ಚಲನಚಿತ್ರಕ್ಕಿರುವ ಶಕ್ತಿಯನ್ನು ಗುರುತಿಸಿದ್ದರು.
ಪ್ರಭಾತ್ ಫಿಲಂಸ್ ಎನ್ನುವ ಸಂಥೆಯನ್ನು ಸ್ಥಾಪಿಸಿದ್ದ ಶಾಂತಾರಾಂ ಅದರ ಮುಖೇನ ಉತ್ತಮ ಸಾಮಾಜಿಕ ಸಂದೇಶಗಳುಳ್ಳ ಚಿತ್ರಗಳನ್ನು ತಂದಿದ್ದರು. ಅದುವೇ ಮುಂದೆ ರಾಜ್ ಕಮಲ್ ಕಲಾ ಮಂದಿರ್ ಎಂದು ಹೆಸರಾಗಿತ್ತು.
ಚಿತ್ರರಂಗಕ್ಕೆ ಸಲ್ಲಿಸಿದ ಅಭುತಪೂರ್ವ ಕೊಡುಗೆ ಪರಿಗಣಿಸಿ 1985ರಲ್ಲಿ ಇಅವರಿಗೆ ದಾದಾ ಸಾಹೇಬ್ ಪಾಲ್ಕೆ ಪುರಸ್ಕಾರ, 1992ರಲ್ಲಿ ಪದ್ಮ ವಿಭುಷಣ ಪ್ರಶಸ್ತಿಗಳು ಸಂದಿದ್ದವು.
1990  ಅ.30ರಂದು ಶಾಂತಾರಾಂ ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ಯಾತ್ರೆ ಮುಗಿಸಿದರು. ಇದಾದ ನಂತರದಲ್ಲಿ ಶಾಂತಾರಾಂ ಅವರ ಹೆಸರಿನಲ್ಲಿ ಮಹಾರಾಷ್ಟ್ರ ಸರ್ಕಾರವು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ಥಾಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com