ಮುಂಬೈ: ನಟಿ ರಾಣಿ ಮುಖರ್ಜಿಗೆ ಪಿತೃ ವಿಯೋಗ

ಬಾಲಿವುಡ್ ನಟಿ ರಾಣಿ ಮುಖರ್ಜಿಯವರ ತಂದೆ ರಾಮ್ ಮುಖರ್ಜಿ ಇಂದು ....
ರಾಣಿ ಮುಖರ್ಜಿ
ರಾಣಿ ಮುಖರ್ಜಿ
ನವದೆಹಲಿ: ಬಾಲಿವುಡ್ ನಟಿ ರಾಣಿ ಮುಖರ್ಜಿಯವರ ತಂದೆ ರಾಮ್ ಮುಖರ್ಜಿ ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಮುಂಬೈನಲ್ಲಿ ನಿಧನ ಹೊಂದಿದ್ದಾರೆ.
ಅವರ ನಿಧನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಹಲವು ಸಮಯಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕುಟುಂಬ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿವೆ.
ಚಿತ್ರ ನಿರ್ಮಾಪಕರಾಗಿದ್ದ ರಾಮ್ ಮುಖರ್ಜಿ ಫಿಲ್ಮಾಲಯ ಸ್ಟುಡಿಯೊದ ಸಹ ಸ್ಥಾಪಕರಾಗಿದ್ದರು. ಹಮ್ ಹಿಂದೂಸ್ತಾನಿ, ಲೀಡರ್ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. 
ರಾಮ್ ಮುಖರ್ಜಿ ತಮ್ಮ ಮಗಳು ರಾಣಿ ಮುಖರ್ಜಿಯವರನ್ನು ಬಂಗಾಳಿ ಚಿತ್ರ ಬಿಯರ್ ಫೂಲ್ ಗೆ ಪರಿಚಯಿಸಿದ್ದರು. ರಾಮ್ ಮುಖರ್ಜಿಯವರು ಪತ್ನಿ ಕೃಷ್ಣಾ ಮುಖರ್ಜಿ, ಪುತ್ರಿ ರಾಣಿ ಮತ್ತು ಪುತ್ರ ರಾಜ ಮುಖರ್ಜಿಯನ್ನು ಅಗಲಿದ್ದಾರೆ.
ಇಂದು ಅಪರಾಹ್ನ 3 ಗಂಟೆ ಸುಮಾರಿಗೆ ಮೃತರ ಅಂತ್ಯಕ್ರಿಯೆ ನೆರವೇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com