ದುಬೈಯಲ್ಲಿ ಡ್ರೈವಿಂಗ್ ಶಾಲೆ ಉದ್ಘಾಟಿಸಿದ ಸಲ್ಮಾನ್ ಖಾನ್; ಟ್ವಿಟ್ಟರ್ ನಲ್ಲಿ ತಮಾಷೆ

ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗೆ ದುಬೈಯಲ್ಲಿ ಡ್ರೈವಿಂಗ್ ಶಾಲೆಯೊಂದನ್ನು ಉದ್ಘಾಟಿಸಿದ್ದರು....
ಸಲ್ಮಾನ್ ಖಾನ್
ಸಲ್ಮಾನ್ ಖಾನ್
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗೆ ದುಬೈಯಲ್ಲಿ ಡ್ರೈವಿಂಗ್ ಶಾಲೆಯೊಂದನ್ನು ಉದ್ಘಾಟಿಸಿದ್ದರು. ಇದಕ್ಕೆ ಅನೇಕ ಟ್ವೀಟಿಗರು ಟ್ವೀಟ್ ಮಾಡಿ ಸಲ್ಮಾನ್ ರನ್ನು ಟ್ರಾಲ್ ಮಾಡಿದ್ದಾರೆ.
2002ರಲ್ಲಿ ಸಲ್ಮಾನ್ ಖಾನ್ ಮುಂಬೈಯಲ್ಲಿ ವಾಹನ ಚಲಾಯಿಸಿ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಆ ವ್ಯಕ್ತಿ ಮೃತಪಟ್ಟಿದ್ದರು. 2015ರ ಡಿಸೆಂಬರ್ ನಲ್ಲಿ ಮುಂಬೈ ಹೈಕೋರ್ಟ್ ಅವರ ವಿರುದ್ಧದ ಕೇಸನ್ನು ಖುಲಾಸೆಗೊಳಿಸಿತ್ತು.
ಈ ಘಟನೆ ನಡೆದು ಇಷ್ಟು ವರ್ಷಗಳ ಮೇಲಾದರೂ ಜನರು ಮಾತ್ರ ಮರೆತಿಲ್ಲ. ಸಲ್ಮಾನ್ ರನ್ನು ವ್ಯಂಗ್ಯ ಮಾಡಿ, ತಮಾಷೆ ಮಾಡಿ ಬರೆದ ಟ್ವೀಟ್ ಗಳೇ ಅಧಿಕವಾಗಿವೆ.
ಸಲ್ಮಾನ್ ಖಾನ್ ಮುಂದೆ ಡ್ರೈವಿಂಗ್ ಶಾಲೆಗೆ ಡಿಕ್ಕಿ ಹೊಡೆಯುವುದರಲ್ಲಿದ್ದಾರೆ ಎಂದು ಒಬ್ಬರು, ಇನ್ನೊಬ್ಬರು ರಾಹುಲ್ ಗಾಂಧಿಯವರ ಕೃತಕ ಬುದ್ಧಿವಂತಿಕೆಯ ಭಾಷಣ, ಸಲ್ಮಾನ್ ಖಾನ್ ಡ್ರೈವಿಂಗ್ ಶಾಲೆಯನ್ನು ಉದ್ಘಾಟಿಸುವುದು, ಕಿಮ್ ಜಾಂಗ್ ಅನ್ ಪ್ರಜಾಪ್ರಭುತ್ವ ಬಗ್ಗೆ ಮಾತನಾಡುವುದಕ್ಕೆ ಕಾಯುತ್ತಿದ್ದೇವೆ ಎಂದು ಇನ್ನೊಬ್ಬರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಡ್ರೈವಿಂಗ್ ಶಾಲೆ ತೆರೆಯುವುದು, ಅಜಯ್ ದೇವಗನ್, ಸನ್ನಿ ಡಿಯೊಲ್ ಡ್ಯಾನ್ಸ್ ಶಾಲೆ ಆರಂಭಿಸುವುದು, ತುಷಾರ್ ಕಪೂರ್ ಮತ್ತು ಉದಯ್ ಚೋಪ್ರಾ ನಟನಾ ಶಾಲೆ ಆರಂಭಿಸುವುದು  ನೋಡಲು ಚಂದ ಎಂದು ಕೆಲವರು ಟ್ವೀಟ್ ಮಾಡಿದರೆ ಇನ್ನೊಬ್ಬರು ಗುರ್ಮೀತ್ ರಾಮ್ ರಹಿಂ ಮಹಿಳೆಯರ ಸುರಕ್ಷತಾ ಕೇಂದ್ರ ತೆರೆಯುತ್ತಾರೆ ಎಂದು ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com