ಬಾಲಿವುಡ್
ಸತ್ಯ ಗೊತ್ತಾದ ಮೇಲೂ, ಕ್ಯಾಮೆರಾ ಕಂಡೊಡನೆ ನಿಶ್ಚಿತಾರ್ಥದ ಉಂಗುರ ಮರೆಮಾಚಿದ ಪ್ರಿಯಾಂಕಾ!
ಗ್ಲೋಬಲ್ ನಟಿ ಖ್ಯಾತಿಯ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನ್ಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವಿದೇಶಿ ಪತ್ರಿಕೆಗಳು ಸುದ್ದಿ ಮಾಡಿದ್ದು ಇದೀಗ...
ಮುಂಬೈ: ಗ್ಲೋಬಲ್ ನಟಿ ಖ್ಯಾತಿಯ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನ್ಸ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವಿದೇಶಿ ಪತ್ರಿಕೆಗಳು ಸುದ್ದಿ ಮಾಡಿದ್ದು ಇದೀಗ ಕ್ಯಾಮೆರಾ ಕಂಡೊಡನೆ ತಮ್ಮ ಬೆರಳಲ್ಲಿರುವ ನಿಶ್ಚಿತಾರ್ಥದ ಉಂಗುರವನ್ನು ಪ್ರಿಯಾಂಕಾ ತೆಗೆದು ಜೇಬಿನಲ್ಲಿ ಇರಿಸಿದ್ದಾರೆ.
ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ಮಾಧ್ಯಮಗಳನ್ನು ಕಂಡ ಕೂಡಲೇ ಪ್ರಿಯಾಂಕಾ ಚೋಪ್ರಾ ತಮ್ಮ ಬೆರಳಿನಲ್ಲಿದ್ದ ಉಂಗುರವನ್ನು ತೆಗೆದು ಜೇಬಿನಲ್ಲಿ ಇರಿಸಿದ್ದಾರೆ. ಇದನ್ನು ಪ್ರಯಾಣಿಕನೊಬ್ಬ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ನನ್ನ ಬೆರಳಲ್ಲಿ ಎಲ್ಲಿಯವರೆಗೂ ಉಂಗುರ ಇರೋದಿಲ್ಲವೋ ಅಂದಿನವರೆಗೆ ನಾನು ಸಿಂಗಲ್ ಎಂದರ್ಥ ಎಂದು ಹೇಳಿದ್ದು ಇದೀಗ ತಮ್ಮ ಕೈಯಲ್ಲಿದ್ದ ಉಂಗುರವನ್ನು ಮಾರೆ ಮಾಚಿದ್ದು ಯಾಕೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ