ಗೋರಕ್ಷಣೆ ಹೆಸರಲ್ಲಿ ಹಲ್ಲೆ ನಡೆಸುವುದು ಶೋಚನೀಯ: ಕಂಗನಾ ರಣಾವತ್

ಪ್ರಾಣಿಗಳನ್ನು ರಕ್ಷಿಸುವ ಅಗತ್ಯ ಇದೆ, ಹಾಗೆಯೇ ಹಸುವಿನಲ ಹೆಸರಲ್ಲಿ ದೇಶದಲ್ಲಿ ನಡೆಯುತ್ತಿರುವ ಹಲ್ಲೆ ಪ್ರಕರಣಗಳು ಅತ್ಯಂತ ದುಃಖಕರ ಎಂದು ಬಾಲಿವುಡ್ ನಟಿ ...
ಕಂಗನಾ ರಣಾವತ್
ಕಂಗನಾ ರಣಾವತ್
Updated on
ಮುಂಬಯಿ: ಪ್ರಾಣಿಗಳನ್ನು ರಕ್ಷಿಸುವ ಅಗತ್ಯ ಇದೆ, ಹಾಗೆಯೇ ಹಸುವಿನಲ ಹೆಸರಲ್ಲಿ ದೇಶದಲ್ಲಿ ನಡೆಯುತ್ತಿರುವ ಹಲ್ಲೆ ಪ್ರಕರಣಗಳು ಅತ್ಯಂತ ದುಃಖಕರ ಎಂದು ಬಾಲಿವುಡ್ ನಟಿ ಕಂಗನಾ ಆತಂಕ ವ್ಯಕ್ತ ಪಡಿಸಿದ್ದಾರೆ.
ದೇಶದಲ್ಲಿ ಹಸುವಿನ ಹೆಸರಲ್ಲಿ ಹಲವು ದೊಂಬಿಗಳು ನಡೆಯುತ್ತಿವೆ, ಈ ಹಲ್ಲೆ ನಡೆಯುತ್ತಿರುವು ಹಸುಗಳ ಕಳ್ಳ ಸಾಗಣಿಕೆಗೂ ಅಥವಾ ಹಸು ತಿನ್ನುತ್ತಾರೆ ಎಂಬ ಕಾರಣಕ್ಕೋ ಎಂದು ಪ್ರಶ್ನಿಸಿದ್ದಾರೆ.
ಪ್ರಾಣಿಗಳನ್ನು ರಕ್ಷಿಸಬೇಕು ನಿಜ, ಆದರೆ ಹಲ್ಲೆಗಳು ಹೇಗಾಗುತ್ತದೆ, ಏನಾಯಿತ ಎಂದು ತಿಳಿದ ಮೇಲೆ ನಿಮ್ಮ ಹೃದಯಕ್ಕೆ ನೋವಾಗುತ್ತದೆ,  ಅದು ತಪ್ಪು ಎಂದು ನಿಮಗನ್ನಿಸುತ್ತದೆ ಎಂದು ಹೇಳಿದ್ದಾರೆ.
ಮುಂಬಯಿ. ಸದ್ಗುರು ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ತಮ್ಮ ಮಣಿಕರ್ಣಿಕಾ ಸಿನಿಮಾ ಬಗ್ಗೆ ಮಾತನಾಡಿದರು. ಜನ ಪೂರ್ವಾಗ್ರಹ ಪೀಡಿತರಾದಾಗ ಇಂಥಹ ಪ್ರಕರಣಗಳಶುಪ ನಡೆಯುತ್ತವೆ.ನಿಮಗೆ ಪ್ರಾಣಿಗಳನ್ನು ರಕ್ಷಿಸಬೇಕು ಎಂದು ಬಯಸಿದರೇ ಅದನ್ನು ಮಾಡಿ,
ಕಾಶ್ಮೀರದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿದ ಕಂಗನಾ ಹಿಂದೂಸ್ತಾನ ನಮ್ಮ ಮಗಳನ್ನು ರೇಪ್ ಮಾಡಿತು ಎಂದು ಹೇಳಿದಿರಿ, ಮೊದಲ ಬಾರಿಗೆ ಪರಸ್ಪರ ಬೆರಳು ತೋರಿಸಿಕೊಂಡು ದೂರಿದ್ದೀರಿ,.ಪ್ರಗತಿಪರರ ಅಜೆಂಡಾ ಏನು? ಎಂದು ಪ್ರಶ್ನಿಸಿದ್ದಾರೆ. ಪ್ರಗತಿಪರರು ಎನು ಮಾಡುತ್ತಿದ್ದಾರೆ,ಇದೊಂದು ಅತ್ಯಂತ ಸೂಕ್ಷ್ಮ ವಿಷಯ, ಇದು ಎಲ್ಲಿಗೆ ಹೋಗುತ್ತಿದೆ ಎಂಬ ಬಗ್ಗೆ ತಿಳಿಯುತ್ತಿಲ್ಲ, ನಮಗೆ ಸ್ಪಷ್ಟವಾದ ನಿರ್ದೇಶನ ಬೇಕು, ದುರಾದೃಷ್ಟಕರವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಕಂಗನಾ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com