ಸಲ್ಮಾನ್ ಖಾನ್ ಹುಟ್ಟುಹಬ್ಬ, ಬಿ-ಟೌನ್ ನಟ, ನಟಿಯರಿಂದ ಶುಭಾಶಯಗಳ ಮಹಾಪೂರ

ಭಾರತದ ಅತಿ ಶ್ರೀಮಂತ ನಟ , ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ 53 ನೇ ಹುಟ್ಟಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಬಾಲಿವುಡ್ ನಟ, ನಟಿಯರು ಹಾಗೂ ಸ್ನೇಹಿತರು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್
Updated on

ನವದೆಹಲಿ:  ಭಾರತದ ಅತಿ ಶ್ರೀಮಂತ ನಟ , ಸೂಪರ್ ಸ್ಟಾರ್  ಸಲ್ಮಾನ್ ಖಾನ್ ಗೆ 53 ನೇ  ಹುಟ್ಟಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಬಾಲಿವುಡ್  ನಟ, ನಟಿಯರು ಹಾಗೂ ಸ್ನೇಹಿತರು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

 ಈ ವಿಶೇಷ ದಿನದ ಅಂಗವಾಗಿ ಸಲ್ಮಾನ್ ಖಾನ್  ತನ್ನ  ಸ್ನೇಹಿತರು ಹಾಗೂ  ಕುಟುಂಬಸ್ಥರಿಗೆ ಆಯೋಜಿಸಿದ್ದ  ಪಾರ್ಟಿಯಲ್ಲಿ  ನಟಿ, ಕತ್ರಿನಾ ಕೈಪ್, ಅನಿಲ್ ಕಪೂರ್,  ಜಾಕ್ವೆಲಿನ್ ಫರ್ನಾಂಡೇಜ್,  ಸೋನಾಕ್ಷಿ ಸಿನ್ಹಾ,  ಮೌನಿ ರಾಯ್ ಹಾಗೂ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್, ಸೊನಾಲಿ ಖಾನ್, ತಂಗಿ ಅರ್ಪಿತಾ ಖಾನ್ ಶರ್ಮಾ ಮತ್ತಿತರು ಪಾಲ್ಗೊಂಡಿದ್ದಾರೆ.

ಕತ್ರಿನಾ ಕೈಪ್, ಮಾಧುರಿ ದೀಕ್ಷಿತ್,  ಸುಷ್ಮಿತಾ ಸೇನ್, ಪ್ರೀತಿ ಜಿಂಟಾ, ಮೌನಿ ರಾಯ್, ಮಾನಿಷ್ ಮಲ್ಹೋತ್ರಾ, ಈಶಾ ಗುಪ್ತಾ ಸೇರಿದಂತೆ ಹಲವು ನಟಿಯರು ಟ್ವೀಟರ್ ಮೂಲಕ ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.
ಸಲ್ಮಾನ್ ಖಾನ್ ಆರೋಗ್ಯ, ಐಶ್ವರ್ಯ ಮತ್ತಷ್ಟು ಹೆಚ್ಚಾಗಿ ಸುಖವಾಗಿ ಬಾಳಲಿ ಎಂದು ಹಾರೈಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com