2018ರ ಹಿನ್ನೋಟ: ಬಾಲಿವುಡ್ ಚಿತ್ರರಂಗದ ದ ಏಳು ಬೀಳಿನ ಹಾದಿ
2018ರ ಹಿನ್ನೋಟ: ಬಾಲಿವುಡ್ ಚಿತ್ರರಂಗದ ದ ಏಳು ಬೀಳಿನ ಹಾದಿ

2018 ಹಿನ್ನೋಟ: ಬಾಲಿವುಡ್ ಚಿತ್ರರಂಗದ ಏಳು ಬೀಳಿನ ಹಾದಿ

2018ನೇ ವರ್ಷ ಬಾಲಿವುಡ್ ಪಾಲಿಗೆ ಎಂದಿನಂತೆ ಸಡಗರ, ಸಂಭ್ರಮ, ಸೋಲು, ಗೆಲುವುಗಳನ್ನು ಸಮನಾಗಿ ಹಂಚಿದೆ.ಬಾಲಿವುಡ್ ಚಿತ್ರರಂಗ ಈ ವರ್ಷ ಸಾಕಷ್ಟು ಮನರಂಜನೆಯನ್ನು ನೀಡಿದ್ದು ಸುಳ್ಳಲ್ಲ.
2018ನೇ ವರ್ಷ ಬಾಲಿವುಡ್ ಪಾಲಿಗೆ ಎಂದಿನಂತೆ ಸಡಗರ, ಸಂಭ್ರಮ, ಸೋಲು, ಗೆಲುವುಗಳನ್ನು ಸಮನಾಗಿ ಹಂಚಿದೆ.ಬಾಲಿವುಡ್ ಚಿತ್ರರಂಗ ಈ ವರ್ಷ ಸಾಕಷ್ಟು ಮನರಂಜನೆಯನ್ನು ನೀಡಿದ್ದು ಸುಳ್ಳಲ್ಲ. 2018 ಮುಗಿಯಲು ಇನ್ನು ಕೆಲವೇ ದಿನಗಳಿರುವಾಗ ಹಿಂದಿ ಚಿತ್ರರಂಗ ಈ ವರ್ಷ ಸಾಗಿಬಂದ ಹಾದಿಯನ್ನೊಮ್ಮೆ ಸಂಕ್ಷಿಪ್ತವಾಗಿ ಅವಲೋಕಿಸುವ ಯತ್ನ ಇಲ್ಲಿ ಮಾಡಲಾಗಿದೆ.
ಬಾಕ್ಸ್ ಆಫೀಸ್ ನಲ್ಲಿ ಗೆದ್ದ, ಸೋತ ಚಿತ್ರಗಳು
ಹಾಗೆ ಹೇಳಬೇಕೆಂದರೆ ಬಾಲಿವುಡ್ ಪಾಲಿಗೆ ಯಾವುದೇ ವರ್ಷದಿಂದ ಈ ವರ್ಷ ಸಾಕಷ್ಟು ವಿಶೇಷವಾಗಿತ್ತು. ವರ್ಷದ ಪ್ರಾರಂಭದಿಂದಲೂ ಅನೇಕ ವಿಷಯಗಳ ಆಧಾರಿತ ವಿಶೇಷ ಸಿನಿಮಾಗಳು ತೆರೆಗೆ ಬಂದಿದ್ದವು. ತಯಾರಕರು ಮಾತ್ರವಲ್ಲದೆ ಪ್ರೇಕ್ಷಕರಿಂದಲೂ. ಮೆಚ್ಚುಗೆ, ತೆಗಳಿಕೆಗಳು ಬಂದಿದ್ದವು. ಥಗ್ಸ್ ಆಫ್ ಹಿಂದೂಸ್ಥಾನ್, ರೇಸ್ 3, ನಮಸ್ತೆ ಇಂಗ್ಲೆಂಡ್, ಫನ್ನಿ ಖಾನ್ ಅಥವಾ ಲವ್ಯಾತ್ರಿ ಅಂತಹಾ ಸಿನಿಮಾಗಳು ಬಿಡುಗಡೆಗೆ ಮುನ್ನ ಇದ್ದ ಭಾರೀ ಕುತೂಹಲಕ್ಕೆ ತಣ್ಣೀರೆರಚುವಂತೆ ಬಾಕ್ಸ್ ಆಪೀಸ್ ನಲ್ಲಿ ವೈಫಲ್ಯ ಕಂಡಿದ್ದವು.
ಆದರೆ ಸ್ತ್ರೀ, ಅಂಧಾಧುನ್, ರಾಝಿ, ಬಧಾಯಿ ಹೋ ಹಾಗೂ ಸೋನು ಕೆ ತಿತು ಕೆ ಸ್ವೀಟಿ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಿದ್ದಲ್ಲದೆ ವಿಮರ್ಶಕರಿಂದ ಸಹ ಮೆಚ್ಚುಗೆ ಪಡೆದಿದ್ದವು.
ಈ ವರ್ಷ ಬಾಕ್ಸ್ ಆಫೀಸ್ ಕೊಳ್ಳೆ ಹಿಡೆದಿದ್ದ ಹಿಂದಿ ಚಿತ್ರಗಳಲ್ಲಿ ಸಂಜು (341.22 ಕೋಟಿ ರು.), ಪದ್ಮಾವತ್ ( 300.00 ಕೋಟಿ ರು.), ಭಾಗೀ 2 (165.00 ಕೋಟಿ ರು.), ಥಗ್ಸ್ ಆಫ್ ಹಿಂದೂಸ್ಥಾನ್ ( 145.29 ಕೋಟಿ ರು.), ಬಧಾಯೀ ಹೋ (136.80 ಕೋಟಿ ರು.) ಗಳು ಮುಖ್ಯವಾಗಿದೆ.
ಕಾನ್ ಗಳ ಖಾಂದಾರ್ ಹೇಗಿತ್ತು?
ಬಾಲಿವುಡ್ ನ್ನು ಆಳುತ್ತಿರುವ ಮೂವರು ಖಾನ್ ಗಳ ಚಿತ್ರಗಳು ಈ ಬಾರಿ ತೆರೆ ಕಂಡಿದ್ದು  ಅದರಲ್ಲಿ ಸಲ್ಮಾನ್ ರೇಸ್ 3 ಸಾಧಾರಣ ಯಶಸ್ಸು ಕಂಡರೆ ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ಥಾನ್ ಹೀನಾಯವಾಗಿ ಸೋತಿತ್ತು. ಇನ್ನು ಶಾರೂಖ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಝೀರೋ ಸಹ ಡಿಸೆಂಬರ್ ೨೧ಕ್ಕೆ ಬಿಡುಗಡೆಯಾಗಿದ್ದು ಪ್ರೇಕ್ಷಕರ ನಿರೀಕ್ಷೆ ಮಟ್ಟ ತಲುಪುವಲ್ಲಿ ವಿಫಲವಾಗಿದೆ.
ಸದ್ದು ಮಾಡಿದ ನೆಟ್ ಫ್ಲಿಕ್ಸ್
ವಿಕ್ರಮಾದಿತ್ಯ ಮೋತ್ವಾನೆ ಹಾಗೂ ಅನುರಾಗ್ ಕಶ್ಯಪ್ ನಿರ್ದೇಶನದ ಭಾರತದ ಪ್ರಥಮ ನೆಟ್ ಫ್ಲಿಕ್ಸ್ ಒರಿಜಿನಲ್ ಸೀರೀಸ್ ಬಿಡುಗಡೆಯಾಗಿ ಸುದ್ದಿಯಾಗಿತ್ತು. ಎಂಟು ಎಪಿಸೋಡ್ ಗಳಲ್ಲಿ ಇದ್ದ ಈ ವೆಬ್ ಸೀರೀಸ್ ನಲ್ಲಿ ಸೈಫ್ ಅಲಿ ಖಾನ್, ನವಾಝುದ್ದೀನ್ ಸಿದ್ದಿಕಿ ಮತ್ತು ರಾಧಿಕಾ ಆಪ್ಟೆ ನಟಿಸಿದ್ದರು. ಸರಣಿ ಯಶಸ್ವಿಯಾಗಿದ್ದರೂ ಸಹ ಕೆಲವು ರಾಜಕೀಯ ಕಾರಣಗಳಿಂದ ಈ ವೆಬ್ ಸೀರೀಸ್ ವ್ವಿವಾದಕ್ಕೆ ಸಹ ಈಡಾಗಿತ್ತು. ಇನ್ನು ಡಿಜಿಟಲ್ ವಿಚಾರದ ಸಂಬಂಧ ಸರ್ಕಾರದ ನೀತಿಯನ್ನು ಪ್ರಶ್ನಿಸಿ ರಿ ಬಾಂಬೆ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಕೆಯಾಗಿತ್ತು.
ಹೊಸ ಮುಖಗಳ ಭರ್ಜರಿ ಎಂಟ್ರಿ
ಈ ವರ್ಷ ಬಾಲಿವುಡ್ ಗೆ ಕಾಲಿರಿಸಿದ ಹೊಸ ಪ್ರತಿಭೆಗಳ ವಿಚಾರಕ್ಕೆ ಬಂದರೆ ಈ ಕೆಳಗಿನ ನಟ  ನಟಿಯರನ್ನು ಹೆಸರಿಸಬಹುದು- ಕೇದಾರ್ ನಾಥ್ ನಲ್ಲಿನ ಸಾರಾ ಅಲಿಖಾನ್, ಗೋಲ್ಡ್ ನಲ್ಲಿ ಕಾಣಿಸಿಕೊಂಡ ಮೌನ್ ರಾಯ್, ಧಡಕ್ ನ ಜಾನ್ಹವಿ ಕಪೂರ್, ಅಕ್ಟೋಬರ್ ಖ್ಯಾತಿಯ ಬನಿತಾ ಸಂಧು, ಲವ್ ಯಾತ್ರಿಯ ಆಯುಶ್ ಶರ್ಮಾ ಹಾಗೂ ಮರೀನಾ ಹುಸ್ಸೇನ್, ಬಿಯಾಂಡ್ ದಿ ಕ್ಲೌಡ್ಸ್ ನ ಇಶಾನ್ ಖಟ್ಟರ್, ಬಾಜಾರ್ ನ ರೋಹನ್ ಮೆಹ್ರಾ, ಕಾರ್ವಾನ್ ನ ದುಲ್ಕರ್ ಸಲ್ಮಾನ್ ಹಾಗೂ ಮಿಥಿಲಾ ಪಲ್ಕರ್, 
ಸದ್ದು ಮಾಡಿದ  ವಿವಾದಗಳು
ಹಾಗೆಯೇ ಬಾಲಿವುಡ್ ಮತ್ತು ವಿವಾದಗಳುಎಂದಿಗೂ ಒಂದನ್ನೊಂದು ಬಿಟ್ಟುಕೊಡುವುದಿಲ್ಲ. ಈ ವರ್ಷ ಸಹ ಹಲವಾರು ಗಾಸಿಪ್ ಗಳು ವಿವಾದಕ್ಕೆ ಕಾರಣವಾಗಿತ್ತು, ಕೆಲವೊಂದು ಪ್ರಕರಣಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕಾಗಿ ಬಂದಿತ್ತು.ಅಂತಹಾ ಕೆಲ ಪ್ರಕರಣದ ವಿವರ ಹೀಗಿದೆ-
ಪದ್ಮಾವತ್ ವಿವಾದ
ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಪದ್ಮಾವತ್ ಬಿಡುಗಡೆಗೆ ಮುನ್ನ ಸಾಕಷ್ಟು ಆಕ್ರೋಶ, ಗಲಭೆಗೆ ಕಾರಣವಾಗಿದ್ದಲ್ಲದೆ ಕೋರ್ಟ್ ಕಛೇರಿಯ ಮೆಟ್ಟಿಲೇರಿತ್ತು.ಆದರೆ ಅಂತಿಮವಾಗಿ ಎಲ್ಲಾ ವಿವಾದಗಳಿಂದ ಬಿಡುಗಡೆ ಪಡೆದು ಚಿತ್ರ ಯಶಸ್ವಿಯಾಗಿದೆ.ಒಂದು ಹಂತದಲ್ಲಿ ದೀಪಿಕಾ ಪಡುಕೋಣೆಯ ಶಿರಚ್ಚೇದನದ ಮಾತು ಕೇಳಿಬಂದದ್ದು ಗಮನಾರ್ಹ.ರಾಜಕೀಯ ಸಂಘಟನೆಗಳು ಹಾಗೂ ಚಿತ್ರರಂಗದ ಗಣ್ಯರು ಈ ವಿವಾದದಲ್ಲಿ ಸಮಾನವಾಗಿ ಪಾಲ್ಗೊಂಡಿದ್ದಾರೆ.ಚಿತ್ರತಂಡದ ಎಲ್ಲಾ ಸದಸ್ಯರಿಗೆ ಜೀವ ಬೆದರಿಕೆಯನ್ನೂ ಒಡ್ಡುವ ಮೂಲಕ ಹಿಂದಿ ಚಿತ್ರರಂಗ ಹಿಂದೆಂದೂ ಕಂಡಿರದ ಕ್ಷೋಭೆಗೆ ಕಾರಣವಾಗಿತ್ತು. ಅದಾಗ್ಯೂ ಚಿತ್ರ ಬಿಡುಗಡೆಯಾದ ಬಳಿಕ ವಿವಾದಗಳೆಲ್ಲಾ ತಣ್ಣಗಾಗಿದ್ದಲ್ಲದೆ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ದೊರಕಿತ್ತು.
ಸಲ್ಮಾನ್ ಗೆ ಜೀವ ಬೆದರಿಕೆ
ಲಾರೆನ್ಸ್ ಬಿಷ್ನೋಯ್ ಎಂಬ ಕುಖ್ಯಾತ ದರೋಡೆಕೋರನಿಂದ ನಟ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಬಂದಿದ್ದು ಈ ವರ್ಷದ ಮಹತ್ವದ ಘಟನೆಯಲ್ಲಿ ಒಂದಾಗಿತ್ತು.ಕೃಷ್ಣ ಮೃಗ ಬೇಟೆ ಪ್ರಕರಣಕ್ಕಾಗಿ ಸಲ್ಮಾನ್ ನ್ಯಾಯಾಲಯಕ್ಕೆ ಹಾಜರಾಗುವ ವೇಳೆಯಲ್ಲೇ ಈ ಬೆದರಿಕೆ ಬಂದಿದ್ದು  ಬಿಷ್ನೋಯ್ ಸಹ ಅದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
'ಭಾರತ್' ನಿಂದ ಪ್ರಿಯಾಂಕಾ ದೂರ
ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ತಾವು ಒಪ್ಪಿ ಸಹಿ ಮಾಡಿದ್ದ ಭಾರತ್ ಚಿತ್ರದ ಅಭಿನಯದಿಂದ ಹಠಾತ್ತನೆ ದೂರ ಸರಿದಿದ್ದರು.ಹೀಗೆ ಚಿತ್ರವೊಂದರಿಂದ ಯಾವ ಮುನ್ಸೂಚನೆ ನೀಡದೆ ಹಿಂದೆ ಸರಿದ ಪ್ರಿಯಾಂಕಾ ಹಲವು ಗಾಸಿಪ್ ಸುದ್ದಿಗಳಿಗೆ ಗ್ರಾಸವಾಗಿದ್ದರು.ಭಾರತ್ ಚಿತ್ರದ ಪ್ರಮುಖ ನಾಯಕಿಯ ಪಾತ್ರ ವಹಿಸಿದ್ದ ಪ್ರಿಯಾಂಕಾ ಕುರಿತು ಚಿತ್ರ ನಿರ್ದೇಶಕರು ನಿಗೂಢ ರೀತಿಯ ಟ್ವೀಟ್ ಂಆಡಿದ್ದರು.ಆಕೆ ಮದುವೆಯ ಡೇಟ್ಸ್ ಗಳಿಗೆ ಹೊಂದಿಕೊಳ್ಳದ ಕಾರಣ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ ಎಂದು ಅವರು ಹೇಳಿದ್ದರು.
ಪ್ಯಾಡ್ ಮ್ಯಾನ್ ವಿರುದ್ಧ ಕೃತಿಚೌರ್ಯದ ಆರೋಪ
ಪ್ಯಾಡ್ ಮ್ಯಾನ್ ಚಿತ್ರ ಬಿಡುಗಡೆಯಾಗಿ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ್ದಲ್ಲದೆ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿದ್ದು ಒಂದೆಡೆಯಾದರೆ ಇನ್ನೊಂದೆಡೆ ಸಿನಿಮಾ ಕಥೆ ಕೃತಿಚೌರ್ಯ ಮಾಡಲಾಗಿದೆ ಎಂದ್ಬ ಆರೋಪ ಕೇಳಿ ಬಂದಿತ್ತು. ರಿಪು ದಮನ್ ಜೈಸ್ವಾಲ್ ಅವರು ಈ ಆರೋಪ ಮಾಡಿದ್ದು ತಾನು ಈ ಹಿಂದೆ ಈ ಕಥೆಯನ್ನು ಧರ್ಮ ಪ್ರೊಡಕ್ಷನ್ ಗಾಗಿ ನೀಡಿದ್ದೆ ಎಂದು ವಾದಿಸಿದ್ದರು. ಆದರೆ ಚಿತ್ರ ನಿರ್ದೇಶಕ ಆರ್. ಬಾಲ್ಕಿ ಮಾತ್ರ ರಿಪು ಅವರ ಆರೋಪವನ್ನು ನಿರಾಕರಿಸಿದ್ದರು.
ಕಡೆಯದಾಗಿ ಈ ವರ್ಷ ಮುಗಿಯುತ್ತಿದೆ, ಮುಂದಿನ ವರ್ಷ ಹಿಂದಿ ಚಿತ್ರರಂಗದಲ್ಲಿ ಇನ್ನಷ್ಟು ಉತ್ತಮ ಚಿತ್ರಗಳು ಬರುತ್ತದೆ, ಆಮೂಲಕ ಇನ್ನಷ್ಟು ಮನರಂಜನೆ ದೊರಕುತ್ತದೆ, ಮತ್ತೆ ಸಾಕಷ್ಟು ಸಂಖ್ಯೆಯ ಹೊಸ ನಟ ನಟಿಯರು ಪರಿಚಯವಾಗಲಿದ್ದಾರೆ ಎಂದು ಆಶಿಸೋಣ.

Related Stories

No stories found.

Advertisement

X
Kannada Prabha
www.kannadaprabha.com