ಭಾರತ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿದ 'ಸೇನಾಧಿಪತಿ' ಮೃಣಾಲ್ ಸೇನ್

ಮೃಣಾಲ್ ಸೇನರ ಬಹುತೇಕ ಚಿತ್ರಗಳಲ್ಲಿ ಕಲ್ಕತ್ತಾ ನಗರದ ಚಿತ್ರಣವಿರುತ್ತಿತ್ತು.ಕೋಲ್ಕತ್ತಾ ನಗರ ಒಂದು ಪಾತ್ರವಾಗಿ, ಪ್ರೇರಣೆಯಾಗಿ ಅವರ ಚಿತ್ರಗಳಲ್ಲಿ ಮೂಡಿತ್ತು.
ಮೃಣಾಲ್ ಸೇನ್
ಮೃಣಾಲ್ ಸೇನ್
Updated on
ವಿಶ್ವಮಟ್ಟದಲ್ಲಿ ಹೆಸರಾದ ಮಹಾನ್ ಭಾರತೀಯ ಚಲನಚಿತ್ರ ನಿರ್ದೇಶಕರಾದ ಮೃಣಾಲ್ ಸೇನ್ ಮೇ 14, 1923ರಂದು ಈಗಿನ ಬಾಂಗ್ಲಾದೇಶದ ಭಾಗವಾಗಿರುವ ಫರೀದ್ ಪುರದಲ್ಲಿ ಜನಿಸಿದರು. ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸಂಪೂರ್ಣಗೊಳಿಸಿದ ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಕೋಲ್ಕತ್ತಾಗೆ ತೆರಳಿದ ಅವರು, ಹೆಸರಾಂತ ಸ್ಕಾಟಿಷ್‌ ಚರ್ಚ್‌ ಕಾಲೇಜಿನಲ್ಲಿ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದರು. ಓರ್ವ ವಿದ್ಯಾರ್ಥಿಯಾಗಿ ಅವರು ಕಮ್ಯುನಿಸ್ಟ್‌ ಪಕ್ಷದ ಸಾಂಸ್ಕೃತಿಕ ವಿಭಾಗದೊಂದಿಗೆ ತಮ್ಮನ್ನು ತೊಡಗಿಸಿಕೊಂಡರು. ಅವರು ಎಂದಿಗೂ ಪಕ್ಷದ ಓರ್ವ ಸದಸ್ಯರಾಗಲಿಲ್ಲವಾದರೂ, ಸಮಾಜವಾದಿ ಧೋರಣೆಯನ್ನು ಹೊಂದಿದ್ದ ಇಂಡಿಯನ್‌ ಪೀಪಲ್‌'ಸ್‌ ಥಿಯೇಟರ್‌ ಅಸೋಸಿಯೇಷನ್‌ (IPTA) ಜೊತೆಗಿನ ಅವರ ಸಹಯೋಗವು, ಸಾಂಸ್ಕೃತಿಕವಾಗಿ ಸಹಯೋಗವನ್ನು ಹೊಂದಿದ್ದ ಹಲವಾರು ಸಮಾನ-ಮನಸ್ಕ ಜನರ ನಿಕಟ ಸಂಪರ್ಕವನ್ನು ಅವರಿಗೆ ದೊರಕಿಸಿಕೊಟ್ಟಿತು.
ಚಿತ್ರರಂಗದಲ್ಲಿ ಶ್ರೀಮಂತಿಕೆಗಳ ಕುರಿತ ಒಂದು ಪುಸ್ತಕ ಓದಿದ ಮೃಣಾಲ್ ಅವರು ಚಿತ್ರರಂಗದತ್ತ ಆಸಕ್ತರಾದರು.ದಾಗ್ಯೂ ಅವರ ಆಸಕ್ತಿಯು ಬಹುತೇಕವಾಗಿ ಬೌದ್ಧಿಕ ಮಟ್ಟದಲ್ಲಿಯೇ ಉಳಿದುಕೊಂಡಿತು, ಮತ್ತು ಅವರು ಔಷಧೀಯ ಉತ್ಪನ್ನಗಳ ಪ್ರತಿನಿಧಿಯ ಉದ್ಯೋಗಕ್ಕೆ ಬಲವಂತವಾಗಿ ಸೇರಬೇಕಾಗಿಬಂತು. ಇದರಿಂದಾಗಿ ಅವರು ಕೋಲ್ಕತ್ತಾದಿಂದ ಆಚೆಗೆ ತಮ್ಮ ಕಾರ್ಯಕ್ಷೇತ್ರವನ್ನು ಬದಲಿಸಿಕೊಳ್ಳಬೇಕಾಯಿತು. ಈ ಉದ್ಯೋಗದಲ್ಲಿ ಅವರು ಬಹಳ ಕಾಲ ಮುಂದುವರಿಯಲಿಲ್ಲ. ಹೀಗಾಗಿ ನಗರಕ್ಕೆ ಮರಳಿದ ಅವರು ಕೊನೆಗೆ ಕಲ್ಕತ್ತಾದ ಚಲನಚಿತ್ರ ಸ್ಟುಡಿಯೋ ಒಂದರಲ್ಲಿ ಶ್ರವ್ಯಮಾಧ್ಯಮ ತಂತ್ರಜ್ಞನ ಉದ್ಯೋಗವೊಂದಕ್ಕೆ ಸೇರಿಕೊಂಡರು. ಈ ಸ್ಟುಡಿಯೋ ಅಂತಿಮವಾಗಿ ಅವರ ಚಲನಚಿತ್ರ ವೃತ್ತಿಜೀವನಕ್ಕೆ ಓಂಕಾರವನ್ನು ಹಾಡಿತು.
1955ರಲ್ಲಿ ತ್ತಮ್ ಕುಮಾರರ ಅಭಿನಯದಲ್ಲಿ ‘ರಾತ್ ಬೋರ್’ ಎಂಬ ಚಿತ್ರ ಮೂಡಿಬಂದಿದ್ದು ಇದು ಮೃನಾಲ್ ಅವರ ಪ್ರಥಮ ಚಿತ್ರವಾಗಿದೆ. ಇದು ಬಾಕ್ಸ್ ಆಫೀಸ್ ನಲ್ಲಿ ಸೋಲುಂಡಿತ್ತು.ಬಳಿಕ ಅವರ ‘ನೀಲ್ ಆಕಾಶೇರ್ ನೀಚೆ’ , ‘ಬೈಶೇಯ್ ಶ್ರವಣ್’ ಮೂಡಿಬಂದಿದ್ದು ‘ಬೈಶೇಯ್ ಶ್ರವಣ್’ ಅವರಿಗೆ ಅಂತರಾಷ್ಟ್ರೀಯ ಪ್ರಖ್ಯಾತಿಯನ್ನು ನೀಡಿತ್ತು.
ಮುಂದೆ ‘ಭಾರತ ಸರ್ಕಾರದ ಚಲನಚಿತ್ರ ಅಭಿವೃದ್ಧಿ ನಿಗಮದ ಸಣ್ಣ ಹೂಡಿಕೆಯೊಂದಿಗೆ ’1969ರಲ್ಲಿ ಮೂಡಿಬಂದ ‘ಭುವನ್ ಶೋಮೆ’ ಭಾರತದಲ್ಲಿ ‘ನವೀನ ಚಲನಚಿತ್ರ’ ಪರಂಪರೆಯನ್ನೇ ಹುಟ್ಟುಹಾಕಿತು ಮೃಣಾಲ್ ಅವರ ಮುಂದಿನ ಅನೇಕ ಚಿತ್ರಗಳಲ್ಲಿ ರಾಜಕೀಯ ವಿಚಾರಧಾರೆಗಳಿದ್ದು ಇದರಿಂದ ಅವರೊಬ್ಬ ಕಮಿನಿಸ್ಟ್ ಕಲಾವಿದರೆಂದೇ ಹೆಸರಾದರು.
ಮೃಣಾಲ್ ಸೇನರ ಬಹುತೇಕ ಚಿತ್ರಗಳಲ್ಲಿ ಕೋಲ್ಕತ್ತಾ ನಗರದ ಚಿತ್ರಣವಿರುತ್ತಿತ್ತು.ಕೋಲ್ಕತ್ತಾ ನಗರ ಒಂದು ಪಾತ್ರವಾಗಿ, ಪ್ರೇರಣೆಯಾಗಿ ಅವರ ಚಿತ್ರಗಳಲ್ಲಿ ಮೂಡಿತ್ತು.
ಮೃಣಾಲ್ ಸೇನ್ ಅವರ ಚಿತ್ರಗಳ ಪಟ್ಟಿ ಹೀಗಿದೆ-
ಸುದೀರ್ಘ ಚಿತ್ರಗಳು
ರಾತ್‌‌ಭೋರ್‌‌ (ದಿ ಡಾನ್‌) (1955)
ನೀಲ್‌ ಆಕಾಶೆರ್‌ ನೀಚೆ (ಅಂಡರ್‌ ದಿ ಬ್ಲೂ ಸ್ಕೈ) (1958)
‌ಬೈಶೇ ಶ್ರಾವಣ್ (ವೆಡ್ಡಿಂಗ್‌ ಡೇ) (1960)
ಪುನಸ್ಚ (ಓವರ್‌ ಎಗೇನ್‌) (1961)
ಅಬಾಶೆಶೆ (ಅಂಡ್‌ ಅಟ್‌ ಲಾಸ್ಟ್‌) (1963)
ಪ್ರತಿನಿಧಿ (ದಿ ರೆಪ್ರೆಸೆಂಟೆಟಿವ್‌) (1964)
‌ಆಕಾಶ್‌ ಕುಸುಮ್ (ಅಪ್‌ ಇನ್‌ ದಿ ಕ್ಲೌಡ್ಸ್‌) (1965)
ಮಾಟಿರಾ ಮನಿಷಾ (ಮ್ಯಾನ್‌ ಆಫ್‌ ದಿ ಸಾಯಿಲ್‌) (1966)
ಭುವನ್ ಶೋಮ್‌ (ಮಿ. ಭುವನ್ ಶೋಮ್‌) (1969)
ಇಂಟರ್‌‌ವ್ಯೂ (1971 ಫಿಲ್ಮ್‌) (1971)
ಏಕ್‌ ಅಧೂರಿ ಕಹಾನಿ (ಆನ್‌ ಅನ್‌ಫಿನಿಶ್ಡ್‌ ಸ್ಟೋರಿ) (1971)
ಕಲ್ಕತ್ತಾ 71 (1972)
‌ಪದಾತಿಕ್ (ದಿ ಗೆರಿಲ್ಲಾ ಫೈಟರ್‌) (1973)
‌ಕೋರಸ್ (1974 ಫಿಲ್ಮ್‌) (1974)
ಮೃಗಯಾ (ದಿ ರಾಯಲ್‌ ಹಂಟ್‌) (1976)
ಒಕ ಊರಿ ಕಥಾ (ದಿ ಔಟ್‌ಸೈಡರ್ಸ್‌) (1977)
‌ಪರಶುರಾಮ್ (ದಿ ಮ್ಯಾನ್‌ ವಿತ್‌ ದಿ ಆಕ್ಸ್‌) (1978)
‌ಏಕ್‌ ದಿನ್‌ ಪ್ರತಿದಿನ್ (ಅಂಡ್‌ ಕ್ವಯೆಟ್‌ ರೋಲ್ಸ್‌ ದಿ ಡಾನ್‌) (1979)
ಅಕಾಲೆರ್‌ ಸಂಧಾನೆ (ಇನ್‌ ಸರ್ಚ್‌ ಆಫ್‌ ಫೆಮೈನ್‌) (1980)
ಚಲಚಿತ್ರ (ದಿ ಕೆಲಿಡೋಸ್ಕೋಪ್‌) (1981)
‌ಖಾರಿಜ್ (ದಿ ಕೇಸ್‌ ಈಸ್‌ ಕ್ಲೋಸ್ಡ್‌) (1982)
‌ಕಂದಹಾರ್ (ದಿ ರೂಯಿನ್ಸ್‌) (1983)
‌ಜೆನೆಸಿಸ್ (1986)
ಏಕ್‌ ದಿನ್‌ ಅಚಾನಕ್‌ (ಸಡನ್ಲಿ, ಒನ್‌ ಡೇ) (1989)
ಮಹಾಪೃಥಿವಿ (ವರ್ಲ್ಡ್‌ ವಿತಿನ್‌, ವರ್ಲ್ಡ್‌ ವಿತೌಟ್‌)(1991)
‌ಅಂತರೀನ್ (ದಿ ಕನ್‌ಫೈನ್ಡ್‌)(1993)
ಆಮಾರ್‌ ಭುವನ್‌ (ದಿಸ್‌, ಮೈ ಲ್ಯಾಂಡ್‌)(2002)
ಕಿರುಚಿತ್ರಗಳು
‌ಇಚ್ಛಾಪೂರಣ್ (ದಿ ವಿಶ್‌ ಫುಲ್‌ಫಿಲ್‌ಮೆಂಟ್‌) (1970)
ತಸ್ವೀರ್‌ ಅಪ್ನಿ ಅಪ್ನಿ (ಪೋರ್ಟ್ರೇಟ್‌ ಆಫ್‌ ಆನ್‌ ಆವರೇಜ್‌ ಮ್ಯಾನ್‌) (1984)
‌ಅಪರಾಜಿತ್ (ಅನ್‌ಕ್ಯಾವೆಂಡಿಷ್ಡ್‌) (1986-87)
‌ಕಭಿ ದೂರ್‌ ಕಭಿ ಪಾಸ್ (ಸಮ್‌ಟೈಮ್ಸ್‌ ಫಾರ್‌, ಸಮ್‌ಟೈಮ್ಸ್‌ ನಿಯರ್‌) (1986-87)
‌‌ಸ್ವಯಂವರ್ (ದಿ ಕೋರ್ಟ್‌ಷಿಪ್‌) (1986-87)
ಆಯಿನಾ (ದಿ ಮಿರರ್‌) (1986-87)
‌ರವಿವಾರ್ (ಸಂಡೆ) (1986-87)
‌ಆಜ್‌ಕಾಲ್ (ದೀಸ್‌ ಡೇಸ್‌) (1986-87)
ದೋ ಬಹೆನೆ (ಟೂ ಸಿಸ್ಟರ್ಸ್‌) (1986-87)
‌ಜೀತ್ (ವಿನ್‌) (1986-87)
ಸಾಲ್‌ಗಿರಾ (ಆನಿವರ್ಸರಿ) (1986-87)
‌ಶಾಲ್ (1986-87)
ಅಜ್‌ನಬಿ (ದಿ ಸ್ಟ್ರೇಂಜರ್‌) (1986-87)
ದಸ್‌ ಸಾಲ್‌ ಬಾದ್‌ (ಟೆನ್‌ ಇಯರ್ಸ್‌ ಲೇಟರ್‌) (1986-87)
ಸಾಕ್ಷ್ಯಚಿತ್ರಗಳು
‌ಮೂವಿಂಗ್‌ ಪರ್‌ಸ್ಪೆಕ್ಟಿವ್ಸ್ (1967)
ತ್ರಿಪುರ ಪ್ರಸಂಗ (1982)
ಸಿಟಿ ಲೈಫ್‌ - ಕಲ್ಕತ್ತಾ ಮೈ ಎಲ್‌ ಡೊರೆಡೊ (1989)
ಅಂಡ್‌ ದಿ ಷೋ ಗೋಸ್‌ ಆನ್‌ - ಇಂಡಿಯನ್‌ ಚಾಪ್ಟರ್‌ (1999)
.ಅಸ್ತಿತ್ವ ಸಿದ್ಧಾಂತ, ಅತಿ ವಾಸ್ತವಿಕತಾ ವಾದ, ಮಾರ್ಕ್ಸ್‌ವಾದ, ಜರ್ಮನ್‌ ಅಭಿವ್ಯಕ್ತಿವಾದ , ಫ್ರೆಂಚ್‌ ಹೊಸ ಅಲೆ ಮತ್ತು ಇಟಲಿಯ ನವ-ವಾಸ್ತವತಾವಾದ ಇವುಗಳಿಂದ ಪಡೆದ ಪರಿಕಲ್ಪನೆಗಳ ಬೆಳವಣಿಗೆಯನ್ನು ಅವರ ಚಲನಚಿತ್ರಗಳು ಶೈಲಿಗೆ ಸಂಬಂಧಿಸಿದ ಅವುಗಳ ಸೂಕ್ಷ್ಮ ವ್ಯತ್ಯಾಸಗಳಲ್ಲಿ ತೋರಿಸುತ್ತವೆ ಎಂಬುದಾಗಿ ವಾದಿಸಬಹುದಾದರೂ, ಈ ಚಲನಚಿತ್ರಗಳು ಅನೇಕವೇಳೆ ವುಡಿ ಅಲೆನ್‌ ಸೃಷ್ಟಿಸಿದ ಚಲನಚಿತ್ರಕ್ಕೆ ಸಮಾನಾಂತರವಾಗಿವೆ ಎನ್ನಬಹುದು.ಅಂದಹಾಗೆ ಅವರ ಸಮಕಾಲೀನರಾಗಿದ್ದ ಇನ್ನೋರ್ವ ಪ್ರಸಿದ್ದ ನಿರ್ದೇಶಕ ಸತ್ಯಜಿತ್ ರೇ ಅವರ ಚಿತ್ರಕ್ಕಿಂತ ಮೃಣಾಲ್ ಅವರ ಚಿತ್ರಗಳು ಭಿನ್ನವಾಗಿದ್ದವು,
1982ರ ವರ್ಷದಲ್ಲಿ ಮೃಣಾಲ್ ಸೇನರು ಬರ್ಲಿನ್ ಚಲನಚಿತ್ರೋತ್ಸವದ ತೀರ್ಪುಗಾರರ ಜ್ಯೂರಿಗೆ ಆಹ್ವಾನಿತರಾದ ಗೌರವ ಪಡೆದಿದ್ದರು
ಭುವನ್ ಶೋಮೆ, ಏಕ್ ದಿನ್ ಪ್ರತಿದಿನ್, ಅಕಾಲೆರ್ ಸಂಧಾನೆ, ಖಂಡಹಾರ್ ಎಲ್ಲವೂ ಅವರಿಗೆ ಅಂತರಾಷ್ಟ್ರೀಯ ಮಟ್ಟದ ಗೌರವ ತಂದುಕೊಟ್ಟ ಚಿತ್ರಗಳಾಗಿದ್ದವು. ಇವರ ಚಿತ್ರಗಳು  ಕೇನ್ಸ್, ಬರ್ಲಿನ್, ವೆನಿಸ್, ಮಾಸ್ಕೋ, ಕರ್ಲೋವಿ ವೇರಿ, ಮಾಂಟ್ರಿಯಲ್, ಚಿಕಾಗೋ ಮತ್ತು ಕೈರೋ ಹೀಗೆ ಬಹುತೇಕ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.International Federation of the Film Societies ಸಂಘಟನಯ ಅಧ್ಯಕ್ಷರಾಗಿದ್ದ ಸೇನ್ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆಗಾಗಿ Taj Enlighten Tareef ಗೌರವ ಮತ್ತು ಓಶಿಯನ್ ಸಿನೆ ಫೆಸ್ಟ್ ಚಲನಚಿತ್ರೋತ್ಸವದ ಗೌರವಗಳು ಸಂದಿವೆ.
 ‘Always Being Born’. ಎಂಬ ಹೆಸರಿನ ಆತ್ಮಚರಿತ್ರೆಯನ್ನು ಮೃಣಾಲ್ ಸೇನ್ ಪ್ರಕಟಿಸಿದ್ದರು.
ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ವಿವಿಗಳು ಡಾಕ್ಟರೇಟ್ ಹಾಗೂ ಅದಕ್ಕೆ ಸಮನಾದ ಗೌರವವನ್ನು ನೀಡಿ ಸೇನ್ ಅವರನ್ನು ಸನ್ಮಾನಿಸಿದವು. ಫ್ರಾನ್ಸಿನ Ordre des Arts et des Lettres  ಪ್ರಶಸ್ತಿಗೆ ಸಹ ಅವರು ಭಾಜನರಾಗಿದ್ದರು.
ಭಾರತ ಸರ್ಕಾರದಿಂದ ಮೃಣಾಲ್ ಸೇನ್ ಅವರಿಗೆ ಸಂದ ಪ್ರಶಸ್ತಿಗಳ ವಿವರ ಹೀಗಿದೆ- 
1981ರಲ್ಲಿ, ಭಾರತ ಸರ್ಕಾರವು ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಓರ್ವ ಭಾರತೀಯ ಚಲನಚಿತ್ರೋದ್ಯಮಿಗೆ ನೀಡಲಾಗುವ ಅತ್ಯುನ್ನತ ಗೌರವವಾದ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಭಾರತ ಸರ್ಕಾರವು ಅವರಿಗೆ 2005ರಲ್ಲಿ ನೀಡಿತು
1998ರಿಂದ 2003ರವರೆಗೆ ಅವರಿಗೆ ಭಾರತದ ಸಂಸತ್ತಿನ ಓರ್ವ ಗೌರವ ಸದಸ್ಯನ ಸ್ಥಾನವನ್ನು ನೀಡಿ ಗೌರವಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com