ಪದ್ಮಾವತ್: ಟೈಟಲ್ ಪಾತ್ರದ ಚಿತ್ರದಲ್ಲಿ 200 ಕೋಟಿ ಗಳಿಸಿದ ಮೊದಲ ನಟಿ ದೀಪಿಕಾ ಪಡುಕೋಣೆ!
ಮುಂಬೈ: ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಇತ್ತೀಚಿಗೆ ತೆರೆಕಂಡ ಪದ್ಮಾವತ್ ಚಿತ್ರ ದೇಶಾದ್ಯಂತ ಸುಮಾರು 230 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಚಿತ್ರದ ಟೈಟಲ್ ಪಾತ್ರದಾರಿಯಾಗಿ 200 ಕೋಟಿ ಗಳಿಸಿದ ಮೊದಲ ನಟಿ ಎಂಬ ಖ್ಯಾತಿಗೆ ದೀಪಿಕಾ ಪಡುಕೋಣೆ ಪಾತ್ರರಾಗಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದು, ಬನ್ಸಾಲಿ ಹಾಗೂ ಸಹ ನಟರಾದ ರಣವೀರ್ ಸಿಂಗ್ ಹಾಗೂ ಶಾಹೀದ್ ಕಾಪೂರ್ ಬಗ್ಗೆ ಪ್ರೀತಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಚಿತ್ರದ ಯಶಸ್ಸಿನ ಬಗ್ಗೆ ಸಂತೋಷವಿದೆ. ವಾರಾಂತ್ಯದ ದಿನಗಳಂದು ಹೆಚ್ಚಿನ ಸಂಖ್ಯೆಯ ಸಿನಿರಸಿಕರು ಚಿತ್ರ ವೀಕ್ಷಿಸುತ್ತಿದ್ದಾರೆ ಎಂದು ದೀಪಿಕಾ ಪಡುಕೋಣೆ ತಿಳಿಸಿದ್ದಾರೆ.
ಇಟಲಿಯ ರಾಯಬಾರಿ ಅಧಿಕಾರಿಗಳು ಮುಂಬೈನಲ್ಲಿ ನಿನ್ನೆ ದೀಪಿಕಾ ಪಡುಕೋಣೆ ಅವರಿಗೆ ಅವಾರ್ಡ್ ವೊಂದನ್ನು ನೀಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ದೀಪಿಕಾ ಪಡುಕೋಣೆ, ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ , ಇದು ಆಚರಣೆಯ ಸಂದರ್ಭವಾಗಿದ್ದು, ಅತ್ಯಂತ ಸಂತೋಷದಿಂದ ಇರುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ