ಶ್ರೀದೇವಿ-ಅಮಿತಾಬ್ ಬಚ್ಚನ್
ಬಾಲಿವುಡ್
ಶ್ರೀದೇವಿಯ ಅಕಾಲಿಕ ಮರಣ ಹಿನ್ನೆಲೆಯಲ್ಲಿ ಭಾವಪೂರ್ಣ ಕವನ ಹಂಚಿಕೊಂಡ ಬಿಗ್ ಬಿ
ಅಸಂಖ್ಯ ಅಭಿಮಾನಿಗಳು ಮತ್ತು ಕುಟುಂಬ ವರ್ಗದವರು ಅಗಲಿ ಬಾಲಿವುಡ್ ನ ಮೊದಲ ಮಹಿಳಾ ....
ನವದೆಹಲಿ: ಅಸಂಖ್ಯ ಅಭಿಮಾನಿಗಳು ಮತ್ತು ಕುಟುಂಬ ವರ್ಗದವರು ಅಗಲಿ ಬಾಲಿವುಡ್ ನ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಸ್ವರ್ಗ ಸೇರಿದ್ದಾರೆ. ದುಬೈಗೆ ಅಳಿಯ ಮೋಹಿತ್ ಮರ್ವಾರ ಮದುವೆಗೆಂದು ಹೋಗಿದ್ದ ಶ್ರೀದೇವಿ ಮೊನ್ನೆ 24ರಂದು ರಾತ್ರಿ ದುಬೈನ ಹೊಟೇಲ್ ನಲ್ಲಿ ಅಸುನೀಗಿದ್ದರು.
ಶ್ರೀದೇವಿಯವರ ಅಂತ್ಯಕ್ರಿಯೆ ನಿನ್ನೆ ಮುಂಬೈನ ಕ್ರೆಮೇಶನ್ ಸ್ಪೋರ್ಟ್ಸ್ ಕ್ಲಬ್ ಗಾರ್ಡನ್ ಸಂಖ್ಯೆ 5, ಲೋಖಂಡ್ ವಾಲಾ ಕಾಂಪ್ಲೆಕ್ಸ್ , ಅಂದೇರಿ ಪಶ್ಚಿಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಸಾಗರೋಪಾದಿಯಲ್ಲಿ ಹರಿದುಬಂದ ಜನಸಾಗರ ಮತ್ತು ಬಾಲಿವುಡ್ ನ ಸಹಸ್ರ ಕಲಾವಿದರು ಹಿರಿಯ ನಟಿಗೆ ಭಾರವಾದ ಹೃದಯದಿಂದ ಭಾವಪೂರ್ಣ ವಿದಾಯ ಹೇಳಿದ್ದರು. ಈ ಸಂದರ್ಭದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಖ್ಯಾತ ಸಾಹಿತಿ ಜಾವೇದ್ ಅಕ್ತರ್ ಅವರ ಭಾವಪೂರ್ಣ ಕವನವನ್ನು ಹಂಚಿಕೊಂಡಿದ್ದಾರೆ.
ಬದುಕಿನ ಅನಿಶ್ಚಿತತೆ ಬಗ್ಗೆ ಹೇಳುವ ಈ ಕವನ ಖಂಡಿತವಾಗಿಯೂ ಓದಿದರೆ ಯಾರ ಕಣ್ಣಿನಲ್ಲಾದರೂ ಕಣ್ಣೀರು ತರಿಸದೆ ಇರದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ